ಕ್ರೀಡೆ

ಮಳೆ ಕಾಟ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 17 ಓವರ್‌ನಲ್ಲಿ 174 ರನ್ ಗುರಿ

ಬ್ರಿಸ್ಬೇನ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಮೊದಲ ಟಿ20 ಪಂದ್ಯ ಮಳೆಯಿಂದಾಗಿ 3 ಓರವ್ ಗಳು ಕಡಿತಗೊಂಡಿದ್ದು 17 ಓರವ್ ಗಳಲ್ಲಿ ಅತಿಥೇಯ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 158 ರನ್ ಪೇರಿಸಿದೆ.
ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಮಾಡಿದ್ದು 158 ರನ್ ಗಳಿಸಿದೆ. ಇನ್ನು ಮೊದಲ ಇನ್ನಿಂಗ್ಸ್ ನ ಕೊನೆಯಲ್ಲಿ ಮಳೆ ಬಂದಿದ್ದರಿಂದ ಪಂದ್ಯವನ್ನು 17 ಓವರ್ ಗಳಿಗೆ ಅಂತಿಮಗೊಳಿಸಲಾಯಿತು. ಇನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 17 ಓವರ್ ಗಳಲ್ಲಿ 174 ರನ್ ಮೊತ್ತದ ಗುರಿ ನೀಡಲಾಗಿದೆ. ಆಸ್ಟ್ರೇಲಿಯಾ ಪರ ಅರೋನ್ ಪಿಂಚ್ 27, ಲಿಯಾನ್ 37, ಮ್ಯಾಕ್ಸ್ ವೆಲ್ 46 ಹಾಗೂ ಸ್ಟೋಯ್ನಿಸ್ ಅಜೇಯ 33 ರನ್ ಗಳಿಸಿದ್ದಾರೆ. ಭಾರತ ಪರ ಬೌಲಿಂಗ್ ನಲ್ಲಿ ಕುಲ್ದೀಪ್ ಯಾದವ್ 2, ಬುಮ್ರಾ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದಿದ್ದಾರೆ.

About the author

ಕನ್ನಡ ಟುಡೆ

Leave a Comment