ರಾಜ್ಯ ಸುದ್ದಿ

ಮಸೀದಿ ಪ್ರವೇಶಿಸಲಾಗದ ಮುಸ್ಲಿಂ ಮಹಿಳೆ ಶಬರಿಮಲೆ ಪ್ರವೇಶಿಸಲೆತ್ನಿಸಿದ್ದು ಉದ್ಧಟತನ: ಪ್ರಮೋದ್ ಮುತಾಲಿಕ್ ಕಿಡಿ

ಬೆಂಗಳೂರು: ಮಸೀದಿ ಪ್ರವೇಶ ಮಾಡಲಾಗದ ಮುಸ್ಲಿಂ ಮಹಿಳೆ ಶಬರಿಮಲೆ ಪ್ರವೇಶ ಮಾಡಲು ಯತ್ನಿಸಿರುವುದು ಉದ್ಧಟತನದ ಪರಮಾವಧಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಕಿ ಡಿಕಾರಿದ್ದಾರೆ. ಶಬರಿಮಲೆ ಪಾರಂಪರೆ ಸಂರಕ್ಷಣಾ ವೇದಿಕೆ ಆಯೋಚಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆ ದೇಗುಲಕ್ಕೆ 10ರಿಂದ 50 ವರ್ಷ ವಯೋಮಾನದ ಮಹಿಳೆರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ತೀರ್ಪನ್ನು ಪುನರ್‌ ಪರಿಶೀಲಿಸಬೇಕೆಂದು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂಬಂಧ ಆಗಸ್ಟ್ 27ರಂದು ಪುರಭವನದಿಂದ ಬೃಹತ್ ಮೆರವಣಿಗೆ ನಡೆಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ ಮಾಡುವ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು. ಭಾರಿ ಪ್ರತಿಭಟನೆಗಳ ನಡುವೆಯೇ ಶಬರಿಮಲೆ ಬೆಟ್ಟ ಹತ್ತಿದ್ದ ಹೈದರಾಬಾದ್‌ನ ಒಬ್ಬರು ಮಹಿಳಾ ಪತ್ರಕರ್ತೆ ಹಾಗೂ ರೆಹಾನಾ ಫಾತಿಮಾ  ಎಂಬ ಮುಸ್ಲಿಂ ಮಹಿಳೆ ದೇಗುಲಕ್ಕೆ ತೆರಳದೆ ವಾಪಸಾಗಿದ್ದರು.

About the author

ಕನ್ನಡ ಟುಡೆ

Leave a Comment