ಅಂಕಣಗಳು

ಮಹಂತ್ ಯೋಗಿ ಕೃತಿ ಬಿಡುಗಡೆಗೆ ಸಿದ್ದತೆ


ರಾಜಪುತ್‌ ಮನೆತನದಲ್ಲಿ 1972ರ ಜೂನ್ 5ರಂದು ಉತ್ತರಾಖಂಡ್‌‌ನ ಗಡ್ವಾಲ್ ಜಿಲ್ಲೆಯಲ್ಲಿ ಜನಿಸಿದ ಯೋಗಿ ಅವರ ಮೂಲ ಹೆಸರು ಅಜಯ್‌ ಸಿಂಗ್‌. ಬಿಎಸ್ಸಿ ಪದವೀಧರಾದ ಅಜಯ್‌ ಸಿಂಗ್‌ ತಮ್ಮ 22ನೇ ವಯಸ್ಸಿಗೆ ಮನೆ ತೊರೆದಿದ್ದರು. ತಮ್ಮ ಪರಿವಾರವನ್ನು ತೊರೆದು ಗೋರಖ್‌ಪುರಕ್ಕೆ ಬಂದ ಅವರು ಇಲ್ಲಿ ಸನ್ಯಾಸ ಜೀವನದತ್ತ ಒಲವು ಹೊಂದಿದರು. ಅಂತೆಯೇ 1994ರಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಮಹಂತ್ ಯೋಗಿ ಆದಿತ್ಯನಾಥಜಿಯವರ ತ್ಯಾಗಮಯ ಜೀವನ, ಅವರ ಸರಳತೆ, ರಾಜಕೀಯ ಚಾಣಾಕ್ಷತೆ, ಆಧ್ಯಾತ್ಮಿಕ ಬದುಕು ಹೀಗೆ ಅನೇಕ ಆಯಾಮಗಳಲ್ಲಿ ಅಪೂರ್ವ ವಿವರಗಳನ್ನು ಒಳಗೊಂಡ ಒಂದು ಅದ್ಭುತ ಪುಸ್ತಕವನ್ನು ನನ್ನ ಮಿತ್ರ ಹಾಗೂ ನಮ್ಮ ಸಮಾಜದ ಪ್ರತಿಭಾವಂತ ಹುಡುಗ, ರಾಜ್ಯ ಪ್ರಶಸ್ತಿ ಪುರಸ್ಕೃತ ಲೇಖಕ ಜಿಎಸ್ ಯುಧಿಷ್ಠಿರ ಬರೆದಿದ್ದಾರೆ.

ಯೋಗಿ ಆದಿತ್ಯನಾಥರ ಕುರಿತು ಈಗ ದೇಶದಲ್ಲೆಡೆ ಏಳುತ್ತಿರುವ ಅಲೆಗೆ ಈ ಪುಸ್ತಕ ‘ಹರಹರ ಯೋಗಿ’. ನಾಮಾಂಕಿತ ಕೃತಿ ಕೈಗನ್ನಡಿಯಂತಿದೆ. ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ಗಣ್ಯರ ಉಪಸ್ಥಿತಿಯಲ್ಲಿ ‘ವೀರಶೈವ ಲಿಂಗಾಯತ ಯುವ ವೇದಿಕೆ’ ಶೀಘ್ರದಲ್ಲೇ ಪ್ರಸ್ತುತಪಡಿಸಲಿದೆ. ಸಮಾಜದ ಎಲ್ಲ ಪ್ರಜ್ಞಾವಂತ ನಾಗರಿಕರು ಈ ಪುಸ್ತಕವನ್ನು ಕೊಂಡು ಓದಿ ಒಂದು ಉನ್ನತವಾದ ರಾಜಕೀಯ ಇಚ್ಛಾಶಕ್ತಿಗೆ ಪ್ರೋತ್ಸಾಹಿಸುತ್ತೀರೆಂಬ ಭರವಸೆಯೊಂದಿಗೆ.

-ಪ್ರಶಾಂತ್ ಕಲ್ಲೂರ್
ರಾಜ್ಯಾಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ

About the author

ಕನ್ನಡ ಟುಡೆ

Leave a Comment