ಸುದ್ದಿ

ಮಹದಾಯಿಗಾಗಿ ಗೋವಾ ಸಿಎಂ ಜೊತೆ ಮಾತುಕತೆ, ಪ್ರಧಾನಿ ಇಲ್ಲದೆ ಸಾದ್ಯವಿಲ್ಲ; ಸಿಎಂ

ಬೆಂಗಳೂರು; ಮಹದಾಯಿ ನದಿ ನೀರು ವಿಚಾರದಲ್ಲಿ ಗೋವಾ ಸಿಎಂ ಜೊತೆ ಮತುಕತೆ ನಡೆಸುವುದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ, ಈ ವರೆಗೆ ಅವರು ಮಾತುಕತೆಗೆ ಹೋಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಗೋವಾ , ಮಹಾರಾಷ್ಟ್ರ ಸಿಎಂಗಳಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಮಾತುಕತೆಗೆ ಅವರು ತಯಾರಿಲ್ಲ ಎಂದು ನ್ಯಾಯಾಧಿಕರಣದಲ್ಲೇ ವಿವಾದ ಇತ್ಯರ್ಥ ಆಗಲಿ ಎಂದು ಹೇಳುತ್ತಿದ್ದಾರೆ.

ಹೀಗಾಗಿ ಪ್ರಧಾನಿಯವರು ಮಧ್ಯ ಪ್ರವೇಶಿಸದೆ ವಿವಾದ ಬಗೆಹರಿಯಲು ಸಾದ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಗೋವಾ ಸಿಎಂ ಜೊತ ಈಗಾಗಲೇ ಅನೌಪಚಾರಿಕ ಮಾತುಕತೆಯಾಗಿದೆ. ಇನ್ನೆರಡು ವಾರದಲ್ಲಿ ಮತ್ತೆ ಭೇಟಿ ಮಾಡಿ ಅಂತಿಮ ಹಂತದ ಸಭೆ ನಡೆಸುತ್ತೇವೆ. ಸಿಎಂ ಮಾಹಿತಿಯಿಲ್ಲದೇ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ

About the author

ಕನ್ನಡ ಟುಡೆ

Leave a Comment