ಸುದ್ದಿ

ಮಹದಾಯಿ ವಿವಾದ: ವಿಧಾನಸಭೆ ಚುನಾವಣೆಯಲ್ಲಿ ಮುಂಬೈ ಕರ್ನಾಟಕ ರೈತರ ನಿರ್ಣಾಯಕ ಪಾತ್ರ

ಹುಬ್ಬಳ್ಳಿ: ಮುಂಬೈ ಹೈದರಾಬಾದ್ ಕರ್ನಾಟಕ ಭಾಗದ ಜನತೆ ಸತತ ಬರಗಾಲ ಮತ್ತು ಬೆಳೆ ನಾಶದಿಂದ ಕಂಗೆಟ್ಟು ಇದೀಗ ರೈತರು ಒಂದು ನಿರ್ಧಾರಕ್ಕೆ ಬರುವ ಹಂತಕ್ಕೆ ಬಂದಿದ್ದಾರೆ.

ನೀರಾವರಿ ಪ್ರದೇಶಗಳಲ್ಲಿ ಕಬ್ಬಿನಂತಹ ಬೆಳೆಯಿಂದ ಕೂಡ ರೈತರಿಗೆ ಯಾವುದೇ ಫಲ ಬಂದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಸಮಸ್ಯೆಗಳಿಗೆ ಸರಿಯಾಗಿ ಸರಿಯಾಗಿ ಸ್ಪಂದಿಸಲಿಲ್ಲವೆಂದಾಗ ರೈತರು ಇದೀಗ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅದಕ್ಕೆ ತಕ್ಕ ತೀರ್ಪು ನೀಡಲು ಮುಂದಾಗಿದ್ದಾರೆ.ಕೃಷಿ ಮತ್ತು ರೈತರ ವಿಚಾರ ಬಂದಾಗ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಬಹುಮುಖ್ಯ ಪಾತ್ರವಹಿಸುತ್ತವೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ 1980ರಲ್ಲಿ ನಲಗುಂದ ಮತ್ತು ನವಲಗುಂದಗಳಲ್ಲಿ ಅಂದಿನ ಗುಂಡೂರಾವ್ ಅವರ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದು. ನರಗುಂದ ಬಂಡಾಯ ಎಂದು ಸಾಮಾನ್ಯವಾಗಿ ಇದನ್ನು ಕರೆಯಲಾಗುತ್ತಿದ್ದು ಇದು ರೈತರ ಚಳವಳಿಗೆ ರಾಜ್ಯದಲ್ಲಿ ನಾಂದಿ ಹಾಡಿದ್ದಲ್ಲದೆ ಆ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನೇ ನಡುಗಿಸಿತ್ತು. 

ಹುಬ್ಬಳ್ಳಿಯ ನವಲಗುಂದ, ನರಗುಂದ ಪ್ರದೇಶಗಳಲ್ಲಿ ಕಬ್ಬು ಬೆಳೆ ಮುಖ್ಯ ಬೆಳೆಯಾಗಿದ್ದು ಸರಿಯಾಗಿ ಬೆಳೆ ಬಾರದೆ ಪ್ರತಿವರ್ಷ ರೈತರು ಕಷ್ಟಕ್ಕೊಳಗಾಗುತ್ತಾರೆ. ಸಕ್ಕರೆ ಕಾರ್ಖಾನೆಗಳನ್ನು ಬಹುಪಾಲು ರಾಜಕೀಯ ನಾಯಕರೇ ಸುಪರ್ದಿಯಲ್ಲಿಟ್ಟುಕೊಂಡಿದ್ದು, ಸರ್ಕಾರ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಯನ್ನು ಬಹಿರಂಗವಾಗಿ ನಿರಾಕರಿಸುತ್ತಾರೆ. ಸರ್ಕಾರ ಕಾರ್ಖಾನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾದರೂ ಕೂಡ ರಾಜಕೀಯ ಮುಖಂಡರ ಲಾಬಿಯಿಂದಾಗಿ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ.

About the author

ಕನ್ನಡ ಟುಡೆ

Leave a Comment