ರಾಷ್ಟ್ರ ಸುದ್ದಿ

ಮಹಾರಾಷ್ಟ್ರದ ಗಡ್‌ ಚಿರೋಲಿಯಲ್ಲಿ ಎನ್‌ಕೌಂಟರ್‌ಗೆ 16 ನಕ್ಸಲರು ಬಲಿ

ಮುಂಬೈ(ಪಿಟಿಐ): ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ಭಾನುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ 16 ಮಂದಿ ನಕ್ಸಲರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೃತರಲ್ಲಿ ಜಿಲ್ಲಾ ಮಟ್ಟದ ನಕ್ಸಲ್‌ ಕಮಾಂಡರ್‌ಗಳಾದ ಸಾಯಿನಾಥ್‌ ಮತ್ತು ಸಿನು ಅಲಿಯಾಸ್‌ ಶ್ರೀಕಂಠ ಕೂಡ ಸೇರಿರುವ ಸಾಧ್ಯತೆ ಇದೆ’ ಎಂದು ಐಜಿಪಿ ಶರದ್‌ ಶೆಲ್ಲಾರ್‌ ತಿಳಿಸಿದ್ದಾರೆ. ‘ಗಡ್‌ಚಿರೋಲಿ ಪೊಲೀಸರ ಸಿ–60 ಕಮಾಂಡೊ ತಂಡ ಛತ್ತೀಸಗಡದ ಬಿಜಾಪುರ ಜಿಲ್ಲೆಯ ಗಡಿಪ್ರದೇಶದಲ್ಲಿರುವ ಕಾಸನಸುರ್‌ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯನಡೆಸುತ್ತಿದ್ದಾಗ, ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದೆ. 12 ಮಂದಿ ನಕ್ಸಲರ ಮೃತದೇಹಗಳು ಈಗಾಗಲೇ ಪತ್ತೆಯಾಗಿವೆ’ ಎಂದು ಪೊಲೀಸ್‌ ಮಹಾನಿರ್ದೇಶಕ ಸತೀಶ್‌ ಮಾಥುರ್‌ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment