ರಾಷ್ಟ್ರ ಸುದ್ದಿ

ಮಹಾರಾಷ್ಟ್ರ: ಚುನಾವಣಾ ಕರ್ತವ್ಯ ತಿರಸ್ಕರಿಸಿದ 26 ಶಿಕ್ಷಕರ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಚುನಾವಣಾ ಕರ್ತವ್ಯ ನಿರ್ವಹಣೆ ಮಾಡಲು ಒಪ್ಪದ 26 ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಈ ಘಟನೆ ನಡೆದಿದ್ದು, ನಲ್ಲಸೊಪಾದ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಲಾದ ಎಲ್ಲಾ ಶಿಕ್ಷಕರನ್ನೂ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಹಾಗೂ ಚುನಾವಣೆಗೆ ಸಂಬಂಧಪಟ್ಟ ಇನ್ನಿತರ ಕೆಲಸ  ಮಾಡುವುದಕ್ಕಾಗಿ ನೇಮಕ ಮಾಡಲಾಗಿತ್ತು. ಜೂ2018 ರಿಂದ ಫೆಬ್ರವರಿ 2019 ರವರೆಗೆ ಶಿಕ್ಷಕರು ಚುನಾವಣಾ ಕೆಲಸ ನಿರ್ವಹಿಸಬೇಕಾಗಿತ್ತು ಆದರೆ 26 ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಚುನವಣಾ ನೋಂದಣಿ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಈ ಆಧಾರದಲ್ಲಿ 26 ಶಿಕ್ಷಕರ ವಿರುದ್ಧ ಅಧಿಕೃತ ಕರ್ತವ್ಯಕ್ಕೆ ಹಾಜರಾಗದೇ ಇರುವ ಆರೋಪದಡಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment