ರಾಷ್ಟ್ರ ಸುದ್ದಿ

ಮಹಾರಾಷ್ಟ್ರ: ವೇದಿಕೆ ಮೇಲೆಯೇ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ

ಅಹಮದ್ ನಗರ(ಮಹಾರಾಷ್ಟ್ರ): ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹಾರಾಷ್ಟ್ರದಲ್ಲಿ ನಡೆದ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಹಠಾತ್ತನೆ ಕುಸಿದು ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಮಹಾರಾಷ್ಟ್ರದ ಅಹಮದ್ ನಗರದ ರಹುರಿಯಲ್ಲಿರುವ  ಮಹಾತ್ಮ ಫುಲೆ ಕೃಷಿ ವಿದ್ಯಾಪೀಠ (ಎಂಪಿಕೆವಿ) ಕೃಷಿ ವಿಶ್ವವಿದ್ಯಾನಿಕಯದ ಸಮಾರಂಭದಲ್ಲಿ ಭಾಗವಹಿಸಿದ್ದ ಗಡ್ಕರಿ ರಾಷ್ಟ್ರಗೀತೆ ಹಾಡುವ ವೇಳೆ ಇತರೆ ಗಣ್ಯರೊಡನೆ ವೇದಿಕೆ ಮೇಲೆ ನಿಂತಿದ್ದಾಗ ಕುಸಿದು ಬಿದ್ದಿದ್ದಾರೆ.

ತೀವ್ರ ನಿತ್ರಾಣದಿಂದ ಕಣ್ಣಿಗೆ ಮಂಜು ಕವಿದಂತಾಗಿ ಅವರು ಕುಸಿದಾಗ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಧಾವಿಸಿ ಉಪಚರಿಸಿದ್ದಾರೆ. ಮಹಾರಾಷ್ಟ್ರ ಗವರ್ನರ್ ಸಿ. ವಿ. ರಾವ್ ಮತ್ತು ಇತರ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಗಡ್ಕರಿ ಮುಖ್ಯ ಅತಿಥಿಗಳಗಿದ್ದರು.

About the author

ಕನ್ನಡ ಟುಡೆ

Leave a Comment