ರಾಜ್ಯ ಸುದ್ದಿ

ಮಹಿಳಾ ಘಟಕ: ಲಕ್ಷ್ಮೀ ಹೆಬ್ಬಾಳ್ಕರ್‌ ಆಪ್ತರಿಗೆ ಕೊಕ್‌

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ಲಕ್ಷ್ಮೀ ಹೆಬ್ಟಾಳ್ಕರ್‌ ಅವಧಿಯಲ್ಲಿ ನೇಮಕಗೊಂಡಿದ್ದ ಶೇ.50ರಷ್ಟು ಪದಾಧಿ ಕಾರಿಗಳಿಗೆ ಕೊಕ್‌ ನೀಡಲಾಗಿದೆ. ಮೂವತ್ತಕ್ಕೂ ಹೆಚ್ಚು ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್‌ ನಿರ್ದೇಶನದಂತೆ ಕರ್ನಾಟಕ ಮಹಿಳಾ ಕಾಂಗ್ರೆಸ್‌ ಉಸ್ತುವಾರಿ ಜನೆತ್‌ ಡಿಸೋಜಾ ಆದೇಶ ಹೊರಡಿಸಿದ್ದು, 7 ಜನ ಉಪಾಧ್ಯಕ್ಷೆಯರು, 27 ಜನ ಪ್ರಧಾನ ಕಾರ್ಯದರ್ಶಿಗಳು, 14 ಕಾರ್ಯದರ್ಶಿಗಳು, 18 ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಹತ್ತು ವಿವಿಧ ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಡಾ.ಪುಷ್ಪಾ ಅಮರನಾಥ್‌ ಅವರು ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಮೇಲೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರೊಂದಿಗೆ ಆಪ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನೇಕ ಪದಾಧಿಕಾರಿಗಳನ್ನು ಕೈ ಬಿಡಲಾಗಿದೆ. ಸಂಘಟನೆಯಲ್ಲಿ ನಿಷ್ಕ್ರಿಯರಾಗಿದ್ದರು ಎನ್ನುವ ಕಾರಣಕ್ಕೆ ಕೈ ಬಿಡಲಾಗಿದೆ ಎಂದು ಹೇಳಲಾಗಿದೆ.

ಹೊಸಬರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದ್ದು, ಪಕ್ಷ ಸಂಘಟನೆಯಲ್ಲಿ ಆಸಕ್ತಿ ಇರುವವರಿಗೆ ಆದ್ಯತೆ ನೀಡಲಾಗಿದೆ. ಇನ್ನೂ ಅನೇಕರು ಪಕ್ಷದ ಕೆಲಸ ಮಾಡಲು ಮುಂದೆ ಬರುತ್ತಿದ್ದಾರೆ. ಹೀಗಾಗಿ ಮತ್ತೂಂದು ಪದಾಧಿಕಾರಿಗಳ ಪಟ್ಟಿ ಮಾಡುವ ಇಚ್ಛೆ ಇದೆ. ಇನ್ನಷ್ಟು ಪದಾಧಿಕಾರಿಗಳನ್ನು ನೇಮಿಸಿಕೊಳ್ಳಲು ಪಕ್ಷದ ಹೈಕಮಾಂಡ್‌ನಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ ಎಂದು ಡಾ.ಪುಷ್ಪಾ ಅಮರನಾಥ್‌ ಹೇಳಿದ್ದಾರೆ. ಲೋಕಸಭಾ ಚುನಾವಣೆ ಇರುವುದರಿಂದ ಶೇ.50 ರಷ್ಟು ಇರುವ ಮಹಿಳಾ ಮತದಾರರನ್ನು ಸೆಳೆಯಲು ಸಕ್ರಿಯರಾಗಿರುವ ಹೊಸ ತಂಡದ ಅಗತ್ಯವಿರುವುದರಿಂದ ಹೆಚ್ಚಿನ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ. ಹೊಸ ಪದಾಧಿಕಾರಿಗಳ ನೇಮಕದಿಂದ ಯಾರಿಗೂ ಅಸಮಾಧಾನವಾಗಿಲ್ಲ. ಆ ರೀತಿಯ ಬೆಳವಣಿಗೆಯಾಗಿದ್ದರೆ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment