ಕ್ರೀಡೆ

ಮಹಿಳಾ ಚಾಂಪಿಯನ್ ಶಿಪ್ ಟೂರ್ನಿಯ: ಕೊಹ್ಲಿ ಬಳಿಕ ಕಿವೀಸ್ ತಂಡವನ್ನು ಬಗ್ಗುಬಡಿದ ಮಿಥಾಲಿ ರಾಜ್ ಪಡೆ

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು ಇದರ ಬೆನ್ನಲ್ಲೇ ನ್ಯೂಜಿಲ್ಯಾಂಡ್ ಮಹಿಳಾ ತಂಡವನ್ನು ಮಿಥಾಲಿ ರಾಜ್ ಪಡೆ ಬಗ್ಗುಬಡಿದಿದೆ.
ನೇಪಿಯರ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ಚಾಂಪಿಯನ್ ಶಿಪ್ ಟೂರ್ನಿಯ  ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ 9 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ಮಹಿಳಾ ತಂಡ 192 ರನ್ ಗಳಿಗೆ ಆಲೌಟ್ ಆಗಿತ್ತು. 193 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡದ ಪರ ಸ್ಫೋಟಕ ಬ್ಯಾಟ್ಸ್ ಮನ್ ಸ್ಮೃತಿ ಮಂದಾನ(105) ಭರ್ಜರಿ ಶತಕ ಸಿಡಿಸಿದ್ದು ಪರಿಣಾಮ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 193 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.
ನ್ಯೂಜಿಲ್ಯಾಂಡ್ ಪರ ಬ್ಯಾಟ್ಸ್ 36, ಡೇವಿನ್ 28, ಸಾಟ್ಟರ್ತ್ ವೈಟ್ 31, ಕೇರ್ 28 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಬಿಸ್ತಾ ಮತ್ತು ಪೂನಂ ಯಾದವ್ 3, ದೀಪ್ತಿ ಶರ್ಮಾ 2 ವಿಕೆಟ್ ಪಡೆದಿದ್ದಾರೆ. ಭಾರತ ಪರ ಬ್ಯಾಟಿಂಗ್ ನಲ್ಲಿ ರೋಡಿರ್ಗಸ್ 81 ಮತ್ತು ಸ್ಮೃತಿ ಮಂದಾನ 105 ರನ್ ಬಾರಿಸಿದ್ದಾರೆ.

About the author

ಕನ್ನಡ ಟುಡೆ

Leave a Comment