ಅ೦ತರಾಷ್ಟ್ರೀಯ

ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ

ಸಂಶೋಧನೆಗೆಂದು ಸಾಕಿದ್ದ 14 ಅಡಿ ಉದ್ದದ ದೈತ್ಯ ಮೊಸಳೆಯೊಂದು 8 ಅಡಿ ಎತ್ತರದ ಗೋಡೆಯನ್ನು ಹಾರಿ ಮಹಿಳಾ ವಿಜ್ಞಾನಿಯನ್ನು ತಿಂದಿರುವ ಭೀಕರ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಇಂಡೋನೇಷ್ಯಾದ ಮೊಸಳೆ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 44ರ ಹರೆಯದ ಡೈಸಿ ಟುವೊ ದೈತ್ಯ ಮೊಸಳೆಗೆ ಬಲಿಯಾಗಿರುವ ದುರ್ದೈವಿ. ಇನ್ನು ಮೊಸಳೆ ದಾಳಿ ದೃಶ್ಯವನ್ನು ನೋಡಿದ ಸಹೋದ್ಯೋಗಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬರುವ ವೇಳೆಗೆ ಮೊಸಳೆ ಆಕೆಯ ಅರ್ಧ ದೇಹವನ್ನು ತಿಂದು ಹಾಕಿದೆ. ಒಟ್ಟಾರೆ 3 ಗಂಟೆಗಳ ಕಾರ್ಯಾಚರಣೆ ಬಳಿಕ ದೈತ್ಯ ಮೊಸಳೆಯನ್ನು ಪೊಲೀಸರು ಸೆರೆ ಹಿಡಿಡಿದಿದ್ದಾರೆ. ಇಂಡೋನೇಷ್ಯಾದಲ್ಲಿ ಮೊಸಳೆಗಳ ಗಾತ್ರ ತುಂಬಾ ದೊಡ್ಡದಾಗಿರುತ್ತದೆ. ಇನ್ನ 2016ರಲ್ಲಿ ರಷ್ಯಾದ ಪ್ರವಾಸಿಗನೊಬ್ಬ ಇಂಡೋನೇಷ್ಯಾದ ಮೊಸಳೆಗೆ ಬಲಿಯಾಗಿದ್ದು ಈ ಘಟನೆ ವಿಶ್ವದಾದ್ಯಂತ ಸುದ್ದಿಯಾಗಿತ್ತು.

About the author

ಕನ್ನಡ ಟುಡೆ

Leave a Comment