ರಾಷ್ಟ್ರ ಸುದ್ದಿ

ಮಹಿಳೆಯರ ಪ್ರವೇಶ ಹಿನ್ನಲೆ ಶುದ್ಧೀಕರಣದ ಬಳಿಕ ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ಸನ್ನಿಧಿ

ಕೊಚ್ಚಿ: ಖ್ಯಾತ ಪವಿತ್ರ ಯಾತ್ರಾ ತಾಣ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿದ್ದ ಹಿನ್ನಲೆಯಲ್ಲಿ ತಾತ್ಕಾಲಿಕ ಸ್ಥಗಿತವಾಗಿದ್ದ ದೇಗುಲವನ್ನು ಶುದ್ಧೀಕರಣ ಕಾರ್ಯದ ಬಳಿಕ ಮತ್ತೆ ತೆರೆಯಲಾಗಿದೆ.
ಇಂದು ಮುಂಜಾನೆ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಇಂದು ಬೆಳಗ್ಗೆ ಸುಮಾರು 3.45ರ ವೇಳೆಯಲ್ಲಿ ಶಬರಿ ಗಿರಿಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದರು. ಈ ವಿಚಾರ ತಿಳಿದ ಬೆನ್ನಲ್ಲೇ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಅಲ್ಲದೆ ದೇವಸ್ವಂ ಮಂಡಳಿಯ ಪ್ರಧಾನ ಅರ್ಚಕರು ಹಾಗೂ ತಂತ್ರಿಗಳ ನೇತೃತ್ವದಲ್ಲಿ ದೇಗುಲದಲ್ಲಿ ಶುದ್ದೀಕರಣ ಕಾರ್ಯ ಮಾಡಲಾಗಿತ್ತು. ಸತತ ಮೂರು ಗಂಟೆಗಳ ಶುದ್ಧೀಕರಣ ಕಾರ್ಯದ ಬಳಿಕ ಇದೀಗ ದೇಗುಲದ ಬಾಗಿಲು ತೆರೆದು ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

About the author

ಕನ್ನಡ ಟುಡೆ

Leave a Comment