ರಾಜ್ಯ ಸುದ್ದಿ

ಮಹಿಳೆ ಜೊತೆ ದುರ್ವರ್ತನೆ: ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ನವದೆಹಲಿ: ಮಹಿಳೆಯ ಜೊತೆ ದುರ್ವರ್ತನೆ ಮಾಡಿದ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಸಿದ್ದರಾಮಯ್ಯ ವಿರುದ್ದ ಎಫ್ ಐ ಆರ್ ದಾಖಲಿಸುವಂತೆ ಕರ್ನಾಟಕ ಪೊಲೀಸರಿಗೆ ಸೂಚನೆ ನೀಡಿದೆ.
ಸಿದ್ದರಾಮಯ್ಯ ವಿರುದ್ಧ  ಎಫ್ ಐ ಆರ್ ದಾಖಲಿಸುವಂತೆ ಕರ್ನಾಟಕ ಪೊಲೀಸರಿಗೆ ಸೂಚಿಸಿದ್ದು, ಅದುವೇ ಅವರಿಗೆ ಸರಿಯಾದ ಶಿಕ್ಷೆ ಎಂದು ಎಂದು ಹೇಳಿದೆ, ಈ ಸಂಬಂಧ ಕರ್ನಾಟಕ ಡಿಜಿಪಿ ಅವರಿಗೆ ಪತ್ರ ಬರೆದು ಕ್ರಮ ಜರುಗಿಸುವಂತೆ ಸೂಚಿಸಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ ಮಹಿಳೆಯ ಕೈಯ್ಯಿಂದ ಕೇವಲ ಮೈಕ್ ಕಿತ್ತುಕೊಂಡಿರುವುದು ಮಾತ್ರವಲ್ಲದೇ ಆಕೆಯ ದುಪ್ಪಟ್ಟ ವನ್ನು ಸಿದ್ದರಾಮಯ್ಯ ಎಳೆದಿದ್ದಾರೆ, ಇದೊಂದು ಆಘಾತಕಾರಿ ವಿಷಯವಾಗಿದೆ, ಹಿಗಾಗಿ ತನಿಖೆ ಸೂಕ್ತವಾಗಿ ನಡೆಯಬೇಕು ಎಂದು ಆಯೋಗ ತಿಳಿಸಿದೆ.

About the author

ಕನ್ನಡ ಟುಡೆ

Leave a Comment