ರಾಷ್ಟ್ರ ಸುದ್ದಿ

ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜಯಂತೋತ್ಸವ

ಬೆಂಗಳೂರು: ವೀರಶೈವ ಲಿಂಗಾಯತ ಯುವ ವೇದಿಕೆ ಶನಿವಾರ ನಗರದ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ೧೧೪ನೇ ಜಯಂತೋತ್ಸವದಲ್ಲಿ ಮಾಜಿ ಸ್ಪೀಕರ್ ಕೆಆರ್ ಪೇಟೆ ಕೃಷ್ಣ, ಪ್ರಶಾಂತ್ ರಿಪ್ಪನಪೇಟೆ, ಕೆಪಿಸಿಸಿ ಕಾರ್ಯದ್ಯಕ್ಷ ದಿನೇಶ್ ಗುಂಡುರಾವ್, ಹುಕ್ಕೇರಿ ಹೀರೆಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವೇದಿಕೆಯ ರಾಜ್ಯ ಘಟಕದ ಪ್ರಶಾಂತ್ ಕಲ್ಲೂರು ನಿಜಲಿಂಗಪ್ಪ ಅವರ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿದರು..
ಇದೇ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಗುಂಡುರಾವ್ ಕರ್ನಾಟಕದ ಏಕೀಕರಣದ ರೂವಾರಿ ಅಖಿಲ ಕರ್ನಾಟಕದ ಚಿಂತನೆ ಸಾಕಾರಗೊಳಿಸಿದ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಹೆಸರನ್ನು ಶಾಶ್ವತವಾಗಿಸಲು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈ ವೇಳೆ ಎಸ್ ನಿಜಲಿಂಗಪ್ಪ ಅವರ ಭಾವಚಿತ್ರದ ನೂತನ ೨೦೧೭ ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

About the author

ಕನ್ನಡ ಟುಡೆ

Leave a Comment