ಸಂಗೀತ

ಮಾಜಿ ರೆಡಿಯೋ ಜಾಕಿ ಬರ್ಬರ ಹತ್ಯೆ.

ತಿರುವನಂತಪುರಂ(ಕೇರಳ)  : ದುಷ್ಕರ್ಮಿಗಳ ಗುಂಪೊಂದು ರೆಡಿಯೋ ಜಾಕಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಿರುವನಂತಪುರಂನಲ್ಲಿ ಸೋಮವಾರ ತಡರಾತ್ರಿ ಸುಮಾರ 2ರ ಸಮಯದಲ್ಲಿ ನಡೆದಿದೆ. ಪಲ್ಲಿಕಲ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಮೆಟ್ರೋ ಸ್ಟುಡಿಯೋದ ಸೌಂಡ್​ ರೆಕಾರ್ಡಿಂಗ್​ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ.

ರಾಜೇಶ್​ ಅಲಿಯಾಸ್​ ರಸಿಕನ್​ ರಾಜೇಶ್​(36) ಕೊಲೆಯಾದ ದುರ್ದೈವಿ. ಕೇರಳ ಎಫ್​ಎಂನಲ್ಲಿ ರೆಡಿಯೋ ಜಾಕಿಯಾಗಿರುವ ರಾಜೇಶ್​ ಮಿಮಿಕ್ರಿ ಕಲಾವಿದ ಹಾಗೂ ಜಾನಪದ ಹಾಡುಗಾರರಾಗಿದ್ದರು. ರಾಜೇಶ್​ ಮತ್ತು ಆತನ ಸ್ನೇಹಿತ ಕಾರ್ಯಕ್ರಮವೊಂದನ್ನು ಮುಗಿಸಿ, ಬಳಿಕ ಉಪಕರಣಗಳನ್ನು ತೆಗೆದುಕೊಂಡು ವಾಪಸು  ಸ್ಟುಡಿಯೋದಲ್ಲಿಡುವಾಗ ಕೆಂಪು ಮಾರುತಿ ಸ್ವಿಫ್ಟ್​ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮೊನೆಚಾದ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ತೀವ್ರ ಗಾಯಗೊಂಡಿದ್ದ ಇಬ್ಬರನ್ನು ತಿರುವನಂತಪುರಂನಲ್ಲಿರುವ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್​ ಸಾವೀಗಿಡಾಗಿದ್ದಾರೆ. ಆತನ ಸ್ನೇಹಿತನಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ರಾಜೇಶ್​ ಅವರು ಕೇರಳ ಎಫ್​ಎಂ ಸ್ಟೇಷನ್​ಗೆ ಸೇರುವ ಮೊದಲು ರೆಡ್​ ಎಫ್​ಎಂನಲ್ಲಿ ಕೆಲಸ ನಿರ್ವಹಿಸಿದ್ದರು. ಇತ್ತೀಚೆಗಷ್ಟೇ ರಾಜೇಶ್​ ಅವರು ವಿದೇಶದಿಂದ ವಾಪಸಾಗಿದ್ದರು.

 

 

About the author

ಕನ್ನಡ ಟುಡೆ

Leave a Comment