ಸುದ್ದಿ

ಮಾಜಿ ಸಿಎಂ ಎಚ್.ಡಿ.ಕೆ ಆರೋಗ್ಯ ಚೇತರಿಕೆ: ಅನಿತಾ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರು ಇಂದು ಪತ್ರಿಕಾ ಹೇಳಿಕೆ ನೀಡಿದರು.

ನನ್ನೊಂದಿಗೆ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಬೆಳಿಗ್ಗೆ ಅರ್ಧ ಗಂಟೆಗಳ ಕಾಲ ಮಾತನಾಡಿದರು,
ಆರೋಗ್ಯದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಸೂಪ್ ಸೇವಿಸಿದ್ದಾರೆ.

ನೀನು, ನಿಖಿಲ್ ಆತಂಕ ಪಡೋದು ಬೇಡ ಎಂದು ನನಗೆ ಧೈರ್ಯ ಹೇಳಿದರು.
ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ಆತಂಕ ಪಡೋದು ಬೇಡ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಪೂಜಾ ಹೋಮಗಳನ್ನ ನಡೆಸಿದ ಎಲ್ಲರಿಗೂ ಧನ್ಯವಾದ ತಿಳಿಸುವಂತೆ ತಿಳಿಸಿದರು.

ಆರು ದಿನಗಳ ಕಾಲ ಅವರು ಇರಲಿದ್ದಾರೆ. ನಂತರ ಒಂದು ತಿಂಗಳ ಕಾಲ ವಿಶ್ರಾಂತಿಯಲ್ಲಿ ಇರಲಿದ್ದಾರೆ.
ಇನ್ ಫೆಕ್ಷನ್ ಆಗುವ ಸಾಧ್ಯತೆ ಇರುವುದರಿಂದ ಈ ಸಂಧರ್ಭದಲ್ಲಿ ಯಾರೊಬ್ಬರೂ ಭೇಟಿಯಾಗಬಾರದೆಂದು ವೈದ್ಯರು ಸೂಚಿಸಿದ್ದಾರೆ. ಎಲ್ಲಾ ಕಾರ್ಯಕರ್ತರು, ಮುಖಂಡರು, ನಾಯಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

About the author

ಕನ್ನಡ ಟುಡೆ

Leave a Comment