ಕ್ರೀಡೆ

ಮಾಧ್ಯಮಗಳೆದುರು ವಾರ್ನರ್ ಪತ್ನಿ ಕಣ್ಣೀರು ಹಾಕಿದ್ದೇಕೆ? ಚೆಂಡು ವಿರೂಪ ಪ್ರಕರಣಕ್ಕೆ ಕ್ಯಾಂಡಿಸ್ ಮೂಲ ಕಾರಣಾನಾ?

ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣ ಆಸಿಸ್ ಕ್ರೀಕೆಟಿಗರ ಕ್ರೀಡಾ ಮನೋಭಾವವನ್ನು ಇಡೀ ವಿಶ್ವಕ್ಕೇ ಪ್ರದರ್ಶನ ಮಾಡಿದ್ದು, ಆಸಿಸ್ ಮಾಜಿ ಉಪ ನಾಯಕ ಡೇವಿಡ್ ವಾರ್ನರ್ ಅವರ ಕ್ರಿಕೆಟ್ ಜೀವನವನ್ನೇ ಬಲಿತೆಗೆದುಕೊಂಡಿದೆ. ಇಷ್ಟಕ್ಕೂ ಈ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಕಾರಣಾನಾ.. ಆಕೆಗೂ ಪ್ರಕರಣಕ್ಕೂ ಏನು ಸಂಬಂಧ..?
ಹುಚ್ಚಾಟವೊಂದು ಹೇಗೆ ನೆಲಕ್ಕೆ ಕೊಡವಿ ತಿವಿದು ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಆಸಿಸ್‌ ಆಟಗಾರರ ಬಾಲ್‌ ಟ್ಯಾಂಪರಿಂಗ್‌ ಹಗರಣ ಉತ್ತಮ ಉದಾಹರಣೆಯಾಗಿದೆ. ಪ್ರಕರಣದಿಂದ ಮನನೊಂದು ಆಸೀಸ್‌ ಕೋಚ್‌ ಲೆಹ್ಮನ್‌ ಹುದ್ದೆ ತಜಿಸಿದರೆ, ಆಸಿಸ್ ನಾಯಕ ಸ್ಮಿತ್‌ ಒಂದು ವರ್ಷ ನಿಷೇಧಕ್ಕೊಳಗಾಗುವ ಮೂಲಕ ತನ್ನ ಹೆತ್ತವರು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಅಲ್ಲದೆ ಇಷ್ಟು ದಿನ ಸ್ಮಿತ್ ಪೋಷಕರು ತಮ್ಮ ಕುಟುಂಬದ ಸದಸ್ಯನಂತೆ ಕಾಣುತ್ತಿದ್ದ ಕ್ರಿಕೆಟ್ ಕಿಟ್ ಈಗ ಕಸದ ಬುಟ್ಟಿ ಸೇರಿದೆ.  ಉದಯೋನ್ಮುಖ ಆಟಗಾರ ಬ್ಕಾಂಕ್ರಾಫ್ಟ್ ತಮ್ಮ ಆರಂಭಿಕ ವೃತ್ತಿ ಜೀವನದಲ್ಲೇ ನಿಷೇಧಕ್ಕೊಳಗಾಗಿದ್ದಾರೆ. ಇನ್ನು ಆಸಿಸ್ ಸ್ಫೋಟಕ ಬ್ಯಾಟ್ಸಮನ್ ಮತ್ತು ಉಪ ನಾಯಕ ಡೇವಿಡ್ ವಾರ್ನರ್ ಕ್ರಿಕೆಟ್ ಜೀವನವೇ ನಶಿಸಿ ಹೋಗಿದೆ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಚೆಂಡು ವಿರೂಪಗೊಳಿಸಿದ ಪ್ರಕರಣ. ಆದರೆ ಇದೀಗ ಈ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ತಾವೇ ಕಾರಣ ಎಂದು ವಾರ್ನರ್ ಪತ್ನಿ ಕ್ಯಾಂಡಿಸ್ ಹೇಳಿಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment