ರಾಜ್ಯ ಸುದ್ದಿ

ಮಾನಸ ಸರೋವರದಲ್ಲಿ ಮಿಂದೆದ್ದ ಶೋಭಾ ಕರಂದ್ಲಾಜೆ ಫೋಟೋ ವೈರಲ್

ಬೆಂಗಳೂರು: ಹಿಂದು ಧಾರ್ಮಿಕ ಭಾವನೆಗಳನ್ನು ಅಣಕ ಮಾಡಿ ಕೇರಳದ ಕಮ್ಯುನಿಷ್ಟ್‌ ಸಂಸದೆ ನೀಡಿದ ಹೇಳಿಕೆ ಖಂಡಿಸಿ ಸಂಸದೆ ಶೋಭಾ ಕರಂದ್ಲಾಜೆ ಅವರು ಟ್ವೀಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಫೋಟೊ ವೈರಲ್‌ ಆಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಕೇಸರಿ ಪಾಳಯದ ಘಟಾನುಘಟಿ ಮುಖಂಡರು ಲೈಕ್‌ ಮಾಡಿದ್ದಾರೆ.

‘ಹಿಂದು ಸ್ತ್ರೀಯರು ತೀರ್ಥಕ್ಷೇತ್ರಗಳಲ್ಲಿ ಮುಳುಗಿ ಏಳುವುದು ಒದ್ದೆ ಮೈ ಪ್ರದರ್ಶನ ಮಾಡುವುದಕ್ಕೆ ಎಂದು ಕಮ್ಯುನಿಷ್ಟ್‌ ನಾಯಕಿ ಶ್ರೀಮತಿ ಎಂಬುವರು ಇತ್ತೀಚೆಗಷ್ಟೇ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತಾವು ಮಾನಸ ಸರೋವರ ಯಾತ್ರೆ ಸಂದರ್ಭದಲ್ಲಿ ತೀರ್ಥಕ್ಷೇತ್ರದಲ್ಲಿ ಮುಳುಗಿ ಎದ್ದ ಭಾವಚಿತ್ರವನ್ನು ಟ್ವೀಟರ್‌ನಲ್ಲಿ ಅಫ್‌ಲೋಡ್‌ ಮಾಡಿರುವ ಶೋಭಾ ಕರಂದ್ಲಾಜೆ, ” ಕಾಮ್ರೆಡ್‌ ಶ್ರೀಮತಿಯವರೇ, ಮಾನಸ ಸರೋವರ ಸೇರಿದಂತೆ ದೇಶದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ನಾನು ಸ್ನಾನ ಮಾಡಿರುವುದು ದೇಹ ಪ್ರದರ್ಶನಕ್ಕಲ್ಲ. ಅದು ನನ್ನ ಧರ್ಮ ಹಾಗೂ ಪುಣ್ಯ ಸ್ಥಳಗಳ ಬಗ್ಗೆ ನಾನು ಹೊಂದಿರುವ ನಂಬಿಕೆಯ ಧ್ಯೋತಕ. ಕೋಟ್ಯಂತರ ಹಿಂದು ಮಹಿಳೆಯರು ನನ್ನಂತೆ ಈ ಸಂಪ್ರದಾಯ ಪಾಲಿಸುತ್ತಾರೆ. ಈ ರೀತಿ ನಮ್ಮ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಧೈರ್ಯ ಪ್ರದರ್ಶಿಸಬೇಡಿ” ಎಂದು ಟ್ವೀಟ್‌ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment