ಅ೦ತರಾಷ್ಟ್ರೀಯ ಪರಿಸರ

ಮಾಲಿನ್ಯ ಉಂಟುಮಾಡುವುದರಲ್ಲಿ ಭಾರತ ಮತ್ತು ಚೀನಾ : ನಂ.1

ವಿಶ್ವದ ಶೇ.95 ರಷ್ಟು ಜನರು ಅಶುದ್ಧ ಗಾಳಿಯನ್ನೇ ಉಸಿರಾಡುತ್ತಿದ್ದಾರೆ. ಮಾಲಿನ್ಯ ಉಂಟುಮಾಡುವುದರಲ್ಲಿ ಭಾರತ ಮತ್ತು ಚೀನಾದ ಪಾಲು ಅತಿಹೆಚ್ಚು ಎಂದು ಅಧ್ಯಯನ ವರದಿಯೊಂದು ಹೇಳಿದೆ.‘ದೂಳಿನಲ್ಲಿರುವ ಚಿಕ್ಕಚಿಕ್ಕ ಕಣಗಳನ್ನು ಉಸಿರಾಡಿ ಅನಾರೋಗ್ಯ ಪೀಡಿತರಾಗುತ್ತಿರುವ ವಿಶ್ವದ ಒಟ್ಟೂ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಎರಡು ದೇಶದಲ್ಲೇ ಇದ್ದಾರೆಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದಹೆಲ್ಎಫೆಕ್ಟ್ಇನ್ಸ್ಟಿಟ್ಯೂಟ್ಸಂಶೋಧಕರು ಅಧ್ಯಯನ ನಡೆಸಿದ್ದಾರೆ.(ಅಧಿಕ ರಕ್ತದೊತ್ತಡ, ಆಹಾರಕ್ರಮಮತ್ತು ಧೂಮಪಾನ ನಂತರ ವಿಶ್ವದಲ್ಲಿ ಅತಿಹೆಚ್ಚು ಜನರು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ವಾಯುಮಾಲಿನ್ಯ. ಕಳೆದ ವರ್ಷ ಮಾಲಿನ್ಯದಿಂದಾಗಿ 60 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಮಾಲಿನ್ಯದ ಕಾರಣ ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೊರಗಿನ ವಾತಾವರಣ ಮಾತ್ರವಲ್ಲದೇ ಮನೆಯ ಒಳಗೂ ಮಲಿನ ವಾತಾವರಣದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಅಡುಗೆಗೆ ಅಥವಾ ಕಾಯಿಸಲು ಬಳಸುವ ಉರುವಲಿಗೂ ಕೂಡ ಮನುಷ್ಯನನ್ನು ಮಾಲಿನ್ಯಕ್ಕೆ ಒತ್ತುತ್ತಿವೆ. 2016ರಲ್ಲಿ ವಿಶ್ವದಲ್ಲಿ 200 ಕೋಟಿಗೂ ಹೆಚ್ಚು ಜನರು ಇಂತಹ ಮಾಲಿನ್ಯಕ್ಕೆ ತೆರದುಕಂಡಿದ್ದಾರೆ ಎಂದುದಿ ಗಾರ್ಡಿಯನ್ವರದಿ ಮಾಡಿದ ಮನೆಯೊಳಗಿನ  ವಾಯುಮಾಲಿನ್ಯವು ಸುತ್ತಲಿನ ಪ್ರದೇಶದ ವಾಯುಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭಾರತದಲ್ಲಿ ವಾಯುಮಾಲಿನ್ಯದಿಂದ ಮೃತಪಟ್ಟವರ ನಾಲ್ವರ ಪೈಕಿ ಒಬ್ಬರು ಇಂತಹ ಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ.ಭಾರತದಲ್ಲಿ ಮನೆಯೊಳಗೆ ಅಡುಗೆ ಇಂಧನ ಎಲ್ಪಿಜಿ ಮತ್ತು ಎಲೆಕ್ಟ್ರಿಕ್ ಗಳ ಬಳಕೆಯಿಂದ ಘನ ಇಂಧನದ ಬಳಕೆ ಕಡಿಮೆಯಾಗಿದೆ.

About the author

ಕನ್ನಡ ಟುಡೆ

Leave a Comment