ಫ್ಯಾಷನ್

ಮಿಸ್ ಗ್ಲಾಮ್ ವರ್ಲ್ಡ್ 2018 : ವಿಜೇತೆಯರಿಗೆ ಕಿರೀಟ ತೊಡಿಸಲಿರುವ ಇಶಾ ತಲ್ವರ್

ಕೊಚ್ಚಿ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ -ಇಂಡಲ್ಜ್ ಪೆಗಾಸಸ್ ಇವೆಂಟ್ ಸಹಯೋಗದಲ್ಲಿ ಮಿಸ್ ಗ್ಲಾಮ್ ವರ್ಲ್ಡ್ 2018 ಸ್ಪರ್ಧೆಯನ್ನು ಇಂದು ಆಯೋಜಿಸುತ್ತಿದ್ದು 39 ದೇಶಗಳ ಸುಂದರಿಯರು ಭಾಗವಹಿಸಲಿದ್ದಾರೆ.

1996ರಲ್ಲಿ ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ ನಂತರ ಭಾರತದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಸೌಂದರ್ಯ ಸ್ಪರ್ಧೆ ಇದಾಗಿದ್ದು ಕೊಚ್ಚಿಯ ಅಡ್ಲಕ್ಸ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸಿಬಿಷನ್ ಕೇಂದ್ರದಲ್ಲಿ ಈ ಸ್ಪರ್ಧೆ ನಡೆಯಲಿದೆ.ರೂಪದರ್ಶಿ ಹಾಗೂ ನಟಿ ಇಶಾ ತಲ್ವರ್ ವಿಜೇತೆಯರಿಗೆ ಕಿರೀಟ ತೊಡಿಸಲಿದ್ದಾರೆ. ಆಸ್ಟ್ರೇಲಿಯಾ, ರಷ್ಯಾ, ಫ್ರಾನ್ಸ್, ದಕ್ಷಿಣ ಕೊರಿಯಾ, ಚೀನಾ, ಮೆಕ್ಸಿಕೊ, ಇಂಡೊನೇಷಿಯಾ, ಮಲೇಷಿಯಾ ಮತ್ತು ಇತರ ದೇಶಗಳ ಸೌಂದರ್ಯವತಿಯರು ಭಾಗವಹಿಸಲಿದ್ದಾರೆ.

2015ರಲ್ಲಿ ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದ ಕೊಚ್ಚಿ ಹುಡುಗಿ ಐಲಿನಾ ಕ್ಯಾಥರಿನ್ ಭಾರತದ ಪ್ರತಿನಿಧಿಯಾಗಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ಸ್ಪರ್ಧೆಯಲ್ಲಿ ಬಿಕಿನಿ ಸುತ್ತು ಎಂದಿರುವುದಿಲ್ಲ. ಸರ್ಕಾರದ ಇಲಾಖೆಗಳಿಂದ ಮತ್ತು ಸಚಿವಾಲಯಗಳಿಂದ ಇದಕ್ಕೆ ಒಪ್ಪಿಗೆ ಸಿಕ್ಕಿದೆ.

About the author

ಕನ್ನಡ ಟುಡೆ

Leave a Comment