ಸಿನಿ ಸಮಾಚಾರ

ಮಿ ಟೂ ಅಭಿಯಾನ: ಕಾದು ನೋಡಿ ಬಿಗ್ ಬಿ ವಿರುದ್ಧ ಸಪ್ನಾ ಭವಾನಿ ಬಾಂಬ್

ನವದೆಹಲಿ:ಭಾರತದಲ್ಲಿ ಆರಂಭಗೊಂಡ ಮಿ ಟೂ ಅಭಿಯಾನದಲ್ಲಿ ಇದೀಗ ಅಲೋಕ್ ನಾಥ್, ವಿಕಾಸ್ ಬಾಲ್, ನಾನಾ ಪಾಟೇಕರ್, ಸಾಜಿದ್ ಖಾನ್, ಅನು ಮಲಿಕ್, ಕೈಲಾಶ್ ಖೇರ್ ಸೇರಿದಂತೆ ಘಟಾನುಘಟಿಗಳ ಹೆಸರು ಕೇಳಿಬರತೊಡಗಿದೆ. ಈ ಹಿಂದೆ ತಾವು ಅನುಭವಿಸಿದ ಲೈಂಗಿಕ ಕಿರುಕುಳ, ಅಸಭ್ಯ ವರ್ತನೆಗಳ ಕುರಿತಾಗಿ ಆರೋಪಿಸುತ್ತಿದ್ದಾರೆ.

ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿ ತನ್ನ ಟ್ವೀಟರ್ ಖಾತೆಯಲ್ಲಿ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧವೇ ತಿರುಗುಬಾಣ ಬಿಟ್ಟಿದ್ದಾರೆ. “ಮಿ ಟೂ ಅಭಿಯಾನಕ್ಕೆ ಅಮಿತಾಬ್ ಬಚ್ಚನ್” ವ್ಯಕ್ತಪಡಿಸಿರುವ ಬೆಂಬಲದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಪ್ನಾ, ಇದೊಂದು ದೊಡ್ಡ ಸುಳ್ಳು. ಸರ್ ಈಗಾಗಲೇ ಪಿಂಕ್ ಸಿನಿಮಾ ಬಿಡುಗಡೆಯಾಯಿತು ಹಾಗೇ ಹೋಯ್ತು. ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಿಮ್ಮ ಮುಖವಾಡ ಶೀಘ್ರವೇ ಕಳಚಿ ಬೀಳಲಿದೆ. ಅತೀ ಶೀಘ್ರದಲ್ಲಿಯೇ ನಿಮ್ಮ ಕುರಿತ ಸತ್ಯ ಬಹಿರಂಗವಾಗಲಿದೆ. ನೀವು ನಿಮ್ಮ ಉಗುರನ್ನು ಕಚ್ಚಿಕೊಳ್ಳುತ್ತಿರಬಹುದು ಎಂದು ಆಶಿಸುತ್ತೇನೆ. ಆದರೆ ಅದು ಸಾಕಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಚ್ಚನ್ ಅವರ ಅಸಭ್ಯ ವರ್ತನೆ ಕುರಿತು ನಾನು(ಸಪ್ನಾ) ವೈಯಕ್ತಿವಾಗಿ ಹಲವು ವಿಷಯಗಳನ್ನು ಕೇಳಿದ್ದೇನೆ..ಹೀಗಾಗಿ ಧೈರ್ಯವಂತ ಮಹಿಳೆಯರು ಹೊರಗೆ ಬಂದು ಸತ್ಯವನ್ನು ಬಹಿರಂಗಗೊಳಿಸಬೇಕು ಎಂದು ಸಪ್ನಾ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment