ರಾಜ್ಯ ಸುದ್ದಿ

ಮೀ ಟೂದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು: ಸಿಎಂಗೆ ಎಚ್ಚರಿಸಿದ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ

ಶಿವಮೊಗ್ಗ: ಸುಳ್ಳಿಗೆ ಯಾವಾಗಲೂ ಆಧಾರ ಇರುವುದಿಲ್ಲ. ಇದೇ ರೀತಿ ಮಾತನಾಡಿದರೆ ಮುಂದೆ ಮೀ ಟೂ ಅಭಿಯಾನದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಗಾರಪ್ಪ ಅವರ‌ ಹೆಸರನ್ನು ಕುಮಾರಸ್ವಾಮಿ ಅವರು ಪದೇ ಪದೇ ಬಳಸಿಕೊಳ್ಳುತ್ತಿದ್ದಾರೆ. ನಾನು ಬಂಗಾರಪ್ಪ ಅವರ ದೊಡ್ಡ‌ಮಗನಿದ್ದಂತೆ ಎಂದು ಹೇಳಿದ್ದಾರೆ. ಆದರೆ, ನೀವಿಬ್ಬರು ಸೇರಿ ಇನ್ನೂ ಏಕೆ ಬಂಗಾರಪ್ಪ ಅವರ ಸಮಾಧಿ ‌ಜಾಗದಲ್ಲಿ ಸ್ಮಾರಕ ನಿರ್ಮಿಸಿಲ್ಲ. ನನಗೆ ಬಿಟ್ಟುಕೊಡಿ 24 ಗಂಟೆಯಲ್ಲಿ ಸ್ಮಾರಕ ನಿರ್ಮಿಸಿ ತೋರಿಸುತ್ತೇನೆ ಎಂದು ಸವಾಲೆಸೆದರು.

ಮೀ ಟೂದಲ್ಲಿ ಪ್ರಸ್ತಾಪ ಆಗಬಹುದು: ಜೆಡಿಎಸ್ ಮತ್ತು ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ ಚುನಾವಣೆ ಮಾಡುವ ಪ್ರಯತ್ನ ನಡೆಸುತ್ತಿವೆ. ಬಿಜೆಪಿ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಮಾಡುತ್ತಿದೆ. ಸಿಎಂ ಕುಮಾರಸ್ವಾಮಿ ಅವರು ಸೊರಬಕ್ಕೆ ಬಂದಾಗ ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಸುಳ್ಳಿಗೆ ಯಾವಾಗಲೂ ಸಾಕ್ಷಿ, ಆಧಾರ ಇರುವುದಿಲ್ಲ. ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ಬಗ್ಗೆ ಸಾಕ್ಷಿ ಸಮೇತ ನಾನು ಮಾತನಾಡುತ್ತೇನೆ. ಇನ್ನೂ ಹೆಚ್ಚು ಮಾತನಾಡಿದರೆ ಮೀ ಟೂದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು ಎಂದು ಎಚ್ಚರಿಕೆ ನೀಡಿದರು.

ಸಿಎಂ ಕುಮಾರಸ್ವಾಮಿ ಕುರಿತಾದ ಬೇಕಾದಷ್ಟು ಸಾಕ್ಷಿಗಳು ಸಾಮಾಜಿಕ ಜಾಲತಾಣದಲ್ಲಿ ಲಿಂಕ್​ ಆಗಿವೆ. ಹುಟ್ಟುಹಬ್ಬ ಆಚರಣೆ ಮಾಡಿರುವುದು, ಮತ್ತೊಂದು ಮಾಡಿರುವುದು, ತಲೆಮರೆಸಿಕೊಂಡಿರುವುದು ಸಾಕಷ್ಟು ಲಿಂಕ್​ಗಳು ಸಿಗುತ್ತವೆ. ನಿಮ್ಮ ಕುಟುಂಬ ಭಾಗವಾದರೆ, ಅವರನ್ನು ಸ್ವೀಕರಿಸಿ ರಾಮನಗರ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಎದುರಿಸಿ, ಅವರನ್ನು ಮತ್ತೊಂದೆಡೆ ಚುನಾವಣಾ ಅಭ್ಯರ್ಥಿಯನ್ನಾಗಿ ಮಾಡಿ. ಇನ್ನೊಬ್ಬರ ಜತೆ ಸಂಬಂಧ ಹೊಂದಬಹುದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ​ ಎಂದು ರಾಧಿಕಾ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿ ಮಾತನಾಡಿದರು.

About the author

ಕನ್ನಡ ಟುಡೆ

Leave a Comment