ರಾಷ್ಟ್ರ ಸುದ್ದಿ

ಮುಂದಿನ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಅತ್ಯುತ್ತಮ ಆಯ್ಕೆ: ವೀರಪ್ಪ ಮೊಯ್ಲಿ

ಹೈದರಾಬಾದ್: ಮುಂದಿನ ಪ್ರಧಾನಿಯಾಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗಿಂತ ಉತ್ತಮ ಆಯ್ಕೆ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಲು ಹಲವು ಪಕ್ಷಗಳೊಡನೆ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿ ತಂತ್ರಗಾರಿಕೆ ರೂಪಿಸುತ್ತಿರುವ ಬೆನ್ನಲ್ಲೇ ಮೊಯ್ಲಿ ತೆಲಂಗಾಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ಟಿಡಿಪಿ ಮುಖಂಡ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ಅವರು ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಗಾಗಿ ಪಕ್ಷದ ಪರ ಪ್ರಚಾರಕಾರ್ಯ ನಡೆಸಿದ ಮೊಯ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಕಳೆದುಕೊಳ್ಳುತ್ತಿದೆ, ನಮ್ಮ ಪಕ್ಷ (ಕ್ಂಗ್ರೆಸ್) ರಾಷ್ಟ್ರಮಟ್ಟದಲ್ಲಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ ಎಂದು ನುಡಿದರು.ರಾಹುಲ್ ಗಾಂಧಿಯೇ ದೇಶದ ಪ್ರಧಾನಿಯಾಗಲು ಉತ್ತಮ ಆಯ್ಕೆಯಾಗಿದೆ ಎಂದು ಮೊಯ್ಲಿ ಪಿಟಿಐಗೆ ತಿಳಿಸಿದರು.ಬಿಜೆಪಿ ವಿರೋಧಿ ಪಕ್ಷಗಳು ರಾಹುಲ್ ಗಾಂಧಿಯನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಲು ಒಪ್ಪುವುದೆ ಎನ್ನುವ ಪ್ರಶ್ನೆಗೆ ಮೊಯ್ಲಿ ಉತ್ತರಿಇಸಿದ್ದು “ನಾನು ಈ ಪ್ರಶ್ನೆಗೆ ಉತ್ತರಿಸಲು ಬಯಸಲಾರೆ, ಆದರೀ ರಾಹುಲ್ ಪ್ರಧಾನಿ ಸ್ಥಾನಕ್ಕೆ ಅತ್ಯುತ್ತಮ ಆಯ್ಕೆಯಾಗಿದ್ದಾರೆ ” ಎಂದರು.
ರಾಜಸ್ಥಾನ, ಮಿಜೋರಾಮ್, ಮಧ್ಯಪ್ರದೇಶ ಸೇರಿ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಜಯಬೇರಿ ಬಾರಿಸಲಿದೆ ಎಂದು ಹೇಳಿರುವ ಮಾಜಿ ಕೇಂದ್ರ ಸಚಿವ ಮೊಯ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ನಿಚ್ಚಳವಾಗುತ್ತಿದೆ, ರಾಹುಲ್ ಮೇಲಿನ ವಿಶ್ವಾಸ ವೃದ್ದಿಸುತ್ತಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲರೂ ಒಗ್ಗೂಡಿದ್ದಾರೆ.ಇದು ನರೇಂದ್ರ ಮೋದಿ ಮತ್ತು ಎನ್ ಡಿಎ ಮೈತ್ರಿಕೂಟಕ್ಕೆ ಮುಳುವಾಗಲಿದೆ. ಬಿಜೆಪಿ ಮೈತ್ರಿ ವಿರುದ್ಧ ಎಲ್ಲಾ ಪಕ್ಷಗಳು ಒಗ್ಗೂಡುತ್ತದೆ ಇದೇ ಮುಖ್ಯ ಎಂದು ಮೊಯ್ಲಿ ವಿವರಿಸಿದರು.

About the author

ಕನ್ನಡ ಟುಡೆ

Leave a Comment