ರಾಜಕೀಯ

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದ ಉಗ್ರಪ್ಪ ಅಭ್ಯರ್ಥಿ

ಬಳ್ಳಾರಿ: 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದ ಉಗ್ರಪ್ಪರೇ ಮೈತ್ರಿ ಪಕ್ಷದ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್- ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿ, ವೇದಿಕೆಯಲ್ಲಿ ನನ್ನ ಸ್ನೇಹಿತ ಸಿದ್ದರಾಮಯ್ಯ ಇದ್ದಾರೆ. ಈ ಹಿಂದೆ ನಮಗೂ ಡಿ.ಕೆ.ಶಿವಕುಮಾರ್​ಗೂ ವ್ಯತ್ಯಾಸಗಳಿದ್ದವು. ಈಗಿನ ವ್ಯವಸ್ಥೆ ವಿರುದ್ಧ ಹೋರಾಡಲು ಒಂದಾಗಿದ್ದೇವೆ. ಉಪ ಚುನಾವಣೆಯಲ್ಲಿ ಡಿಕೆಶಿ ತೋರಿದ ನೈಪುಣ್ಯತೆ ಮೆಚ್ಚುವಂಥದ್ದು. ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿದ ಕೀರ್ತಿ ಉಗ್ರಪ್ಪಗೆ ಸಲ್ಲುತ್ತದೆ ಎಂದರು. ಮೋದಿ ಕೆಟ್ಟ ಆಡಳಿತಕ್ಕೆ ಅಂತ್ಯ ಸಾಧ್ಯ ಎಂಬುದನ್ನು ಬಳ್ಳಾರಿ, ಮಂಡ್ಯ ಜನ ಸಾಬೀತುಪಡಿಸಿದ್ದಾರೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment