ರಾಷ್ಟ್ರ ಸುದ್ದಿ

ಮುಂಬಯಿ ಶೇರು ನಿರಂತರ 4ನೇ ದಿನ ಏರಿಕೆ

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ, ನಿರಂತರ ನಾಲ್ಕನೇ ದಿನದ ಜಿಗಿತದ ರೂಪದಲ್ಲಿ, 63 ಅಂಕಗಳ ಏರಿಕೆಯನ್ನು ದಾಖಲಿಸಿತು. ಡಾಲರ್‌ ಎದುರು ಭಾರತದ ರೂಪಾಯಿಯ ಬಲವರ್ಧನೆ, ತೈಲ ಬೆಲೆ ಇಳಿಕೆ ಮತ್ತು ದೇಶದ ಸ್ಥೂಲ ಆರ್ಥಿಕ ಸ್ವರೂಪ ಆಶಾದಾಯಕವಾಗಿರುವುದೇ ಮೊದಲಾದ ಧನಾತ್ಮಕ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದು ತೇಜಿ ಕಂಡಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 11,000 ಅಂಕಗಳ ಮೇಲ್ಮಟ್ಟವನ್ನು  ಕಾಯ್ದುಕೊಂಡಿತು.

ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್‌ 93.69 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,729.79 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.60 ಅಂಕಗಳ ಮುನ್ನಡೆಯೊಂದಿಗೆ 11,064.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ  30 ಪೈಸೆಗಳ ಏರಿಕೆಯನ್ನು ದಾಖಲಿಸಿ 69.98 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

 

About the author

ಕನ್ನಡ ಟುಡೆ

Leave a Comment