ರಾಷ್ಟ್ರ ಸುದ್ದಿ

ಮುಂಬಯಿ ಶೇರು 157 ಅಂಕ ಜಿಗಿತ

ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿನ ತೇಜಿಯನ್ನು ಅನುಸರಿಸಿ ಮುನ್ನುಗ್ಗಿದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 157 ಅಂಕಗಳ ಜಿಗಿತದೊಂದಿಗೆ 35,807.28 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಡಿಸೆಂಬರ್‌ ಸರಣಿಯ ವಾಯಿದೆ ವಹಿವಾಟು ಅಂತ್ಯ, ಏಶ್ಯನ್‌ ಶೇರು ಪೇಟೆಯಲ್ಲಿನ ತೇಜಿ ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆ ಇಂದು ಗೆಲುವಿನ ಹಾದಿ ಹಿಡಿಯಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 49.95 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,779.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದು ಅತೀ ದೊಡ್ಡ ಗೇನರ್‌ಗಳಾಗಿ ಮೂಡಿ ಬಂದ ರಿಲಯನ್ಸ್‌, ಇನ್‌ಫೋಸಿಸ್‌, ಎನ್‌ಟಿಪಿಸಿ, ಒಎನ್‌ಜಿಸಿ, ಎಚ್‌ಯುಎಲ್‌, ಪವರ್‌ ಗ್ರಿಡ್‌, ಏಶ್ಯನ್‌ ಪೇಂಟ್‌, ಐಟಿಸಿ, ಎಚ್‌ಸಿಎಲ್‌ ಟೆಕ್‌ ಶೇರುಗಳು ಶೇ.2 ಮುನ್ನಡೆಯನ್ನು ದಾಖಲಿಸಿದವು.

ಇದೇ ವೇಳೆ ಹೀರೋ ಮೋಟೋ ಕಾರ್ಪ್‌, ಭಾರ್ತಿ ಏರ್‌ಟೆಲ್‌, ಟಾಟಾ ಮೋಟರ್‌, ಟಾಟಾ ಸ್ಟೀಲ್‌, ಮಾರುತಿ ಸುಜುಕಿ ಶೇ.2ರಷ್ಟು ಕುಸಿದವು.

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು   2,747 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,315 ಕಂಪೆನಿಗಳು ಮುನ್ನಡೆ ಸಾಧಿಸಿದವು;  1,241 ಕಂಪೆನಿಗಳು ಹಿನ್ನಡೆಗೆ ಗುರಿಯಾದವು;  191 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.

 

About the author

ಕನ್ನಡ ಟುಡೆ

Leave a Comment