ಸಿನಿ ಸಮಾಚಾರ

ಮುಂಬೈ ಅತ್ಯಾಚಾರ ಪ್ರಕರಣ: ಬಾಲಿವುಡ್‌ ನಟ ಅಲೋಕ್‌ ನಾಥ್‌ ವಿರುದ್ಧ ಎಫ್‌ಐಆರ್‌

ಮುಂಬೈ: ಹಿರಿಯ ಕಥೆಗಾರ್ತಿ- ನಿರ್ಮಾಪಕಿ ವಿಂತಾ ನಂದಾ ಅವರು ಮಾಡಿದ್ದ ಅತ್ಯಾಚಾರ ಆರೋಪದ ದೂರಿನ ಮೇಲೆ ಬಾಲಿವುಡ್‌ ನಟ ಮತ್ತು ಟಿವಿ ಆ್ಯಂಕರ್‌ ಅಲೋಕ್‌ ನಾಥ್‌ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಲೇಖಕಿ ವಿಂತಾ ನಂದಾ ಅವರು ನೀಡಿದ ದೂರಿನ ಅನ್ವಯ ಮುಂಬೈನ ಓಶಿವಾರ ಪೊಲೀಸ್‌ ಠಾಣೆಯಲ್ಲಿ ಅಲೋಕ್‌ ವಿರುದ್ಧ ಐಪಿಸಿ ಸೆಕ್ಷನ್‌ 376ರ ಅಡಿ ಬುಧವಾರ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಮನೋಜ್‌ ಶರ್ಮಾ ತಿಳಿಸಿದ್ದಾರೆ.

62 ವರ್ಷದ ಅಲೋಕ್‌ ನಾಥ್‌ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಿನಿ ಮತ್ತು ಟಿವಿ ಆರ್ಟಿಸ್ಟ್‌ ಅಸೋಸಿಯೇಷನ್‌ನಿಂದ ಅಲೋಕ್‌ ಅವರನ್ನು ಹೊರಹಾಕಲಾಗಿತ್ತು. ಬಾಲಿವುಡ್‌ನಲ್ಲಿ ಅತ್ಯಂತ ಸಭ್ಯ ಹಾಗೂ ಸಂಸ್ಕಾರಿ ನಟ ಎಂದೇ ಖ್ಯಾತಿ ಹೊಂದಿದವರು 2 ದಶಕಗಳ ಹಿಂದೆ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು. ಈ ವಿಚಾರವನ್ನು ಬಹಿರಂಗಪಡಿಸಲು ನಾನು 19 ವರ್ಷ ಕಾಯಬೇಕಾಯಿತು ಎಂದು ವಿಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅಲೋಕ್ ಅವರ ಹೆಸರನ್ನು ನೇರವಾಗಿ ಹೇಳಿಲ್ಲ. ಬದಲಿಗೆ ವಿಂತಾ ಅವರು 1990ರ ದಶಕದ ಖ್ಯಾತ ಸಂಸ್ಕಾರಿ ಮತ್ತು ಸುವಿಖ್ಯಾತ ಟಿವಿ ನಟ ಎಂದು ಮೀಟೂ ಅಭಿಯಾನದಲ್ಲಿ ವಿಂತಾ ಆರೋಪಿಸಿದ್ದರು. ಅದಾದ ಬಳಿಕ ಅಕ್ಟೋಬರ್‌ನಲ್ಲಿ ಅಲೋಕ್‌ ನಾಥ್‌ ಅವರ ವಿರುದ್ಧ ದೂರು ನೀಡಿದ್ದರು. ನಿರ್ಮಾಪಕಿ ವಿಂತಾ ನಂದಾ ಮಾಡಿದ್ದ ಆರೋಪವನ್ನು ನಿರಾಕರಿಸಿದ್ದ ಅಲೋಕ್‌, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

About the author

ಕನ್ನಡ ಟುಡೆ

Leave a Comment