ಕ್ರೀಡೆ

ಮುಂಬೈ: ಐಪಿಎಲ್ ಪಂದ್ಯದ ವೇಳೆ ಗಾಯಗೊಂಡ ಜಸ್ ಪ್ರೀತ್ ಬುಮ್ರಾ

ಮುಂಬೈ: ಐಸಿಸಿ ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಕೆಲ ತಿಂಗಳು ಬಾಕಿಯಿದ್ದು ಈ ಮಧ್ಯೆ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿರುವುದು ಆಯ್ಕೆಗಾರರ ನಿದ್ದೆಗೆಡಿಸಿದೆ. ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದ ವೇಳೆ ಜಸ್ ಪ್ರೀತ್ ಬುಮ್ರಾ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಮುಂಬೈ ತಂಡದ ಪರ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ಬುಮ್ರಾ ಚೆಂಡನ್ನು ಹಿಡಿಯಲು ಡೈವ್ ಮಾಡಿದ್ದು ಈ ವೇಳೆ ಭುಜದ ಸಮಸ್ಯೆಗೆ ಒಳಗಾದಿದ್ದಾರೆ. ಭುಜದ ಸಮಸ್ಯೆಗೆ ತುತ್ತಾಗುತ್ತಿದ್ದಂತೆ ಮುಂಬೈ ತಂಡದ ವೈದ್ಯರು ಮೈದಾನಕ್ಕೆ ಬಂದು ಬುಮ್ರಾಗೆ ತುರ್ತು ಚಿಕಿತ್ಸೆ ನೀಡಿದರು. ಇನ್ನು ಶೀಘ್ರದಲ್ಲೇ ಅವರು ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ಆಗಿರುವ ಬುಮ್ರಾ ಅವರು ಗಾಯದ ಸಮಸ್ಯೆಗೆ ಗುರಿಯಾಗಿರುವುದು ಸದ್ಯ ಬಿಸಿಸಿಐ ಚಿಂತೆಗೀಡಾಗುವಂತೆ ಮಾಡಿದೆ.

About the author

ಕನ್ನಡ ಟುಡೆ

Leave a Comment