ರಾಷ್ಟ್ರ ಸುದ್ದಿ

ಮುಖಾಮುಖಿ ಎದುರಾದರೂ ಪರಸ್ಪರ ಮಾತನಾಡದ ಪ್ರಧಾನಿ ಮೋದಿ-ರಾಹುಲ್

ನವದೆಹಲಿ: 2001ರಲ್ಲಿ ಸಂಭವಿಸಿದ ಸಂಸತ್ ಮೇಲಿನ ದಾಳಿಯ ವರ್ಷಾಚರಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಮುಖಾಮುಖಿ ಎದುರಾದರೂ ಪರಸ್ಪರ ಮಾತನಾಡದೇ, ನಗದೆ ಮುಖ ತಿರುಗಿಸಿಕೊಂಡು ಹೋದ ಪ್ರಸಂಗ ನಡೆಯಿತು.
ಕಾರ್ಯಕ್ರಮದಲ್ಲಿ ಉಭಯ ನಾಯಕರಿಬ್ಬರೂ ಅಂತರ ಕಾಯ್ದುಕೊಂಡರು. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು, ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಸೇರಿದಂತೆ ಅನೇಕರು ಸಮಾರಂಭದಲ್ಲಿ ಹಾಜರಿದ್ದರು. ಮನಮೋಹನ್ ಸಿಂಗ್ ಅವರ ಜೊತೆಗೆ ಮೋದಿ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಆದರೆ, ರಾಹುಲ್ ಗಾಂಧಿ- ಮೋದಿ ಮಾತ್ರ ಪರಸ್ಪರರು ಮಾತನಾಡಲೇ ಇಲ್ಲ. ಕೇಂದ್ರ ಸಚಿವರಾದ ರಾಮದಾಸ್ ಅಠಾವಳೆ ಹಾಗೂ ವಿಜಯ್ ಗೋಯಲ್ ಅವರು ರಾಹುಲ್ ಗಾಂಧಿಯವರ ಕೈ ಕುಲುಕಿ ಕುಶಲೋಪರಿ ವಿಚಾರಿಸಿದರು.

About the author

ಕನ್ನಡ ಟುಡೆ

Leave a Comment