ರಾಜ್ಯ ಸುದ್ದಿ

ಮುಧೋಳ ಸ್ಫೋಟ ಪ್ರಕರಣ: ಸಂತ್ರಸ್ಥರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಮುರುಗೇಶ್ ನಿರಾಣಿ

ಬಾಗಲಕೋಟೆ: ಸಕ್ಕರೆ ಕಾರ್ಖಾನೆಯಲ್ಲಿನ ಬಾಯ್ಲರ್ ಸ್ಛೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಸಾವಿಗೀಡಾದವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಫ್ಯಾಕ್ಟರಿಯ ಮಾಲೀಕ ಮಾಜಿ ಸಚಿವ ಮುರುಗೇಶ್ ನಿರಾಣಿ ಘೋಷಿಸಿದ್ದಾರೆ.
ನಿನ್ನೆ ಬಾಗಲಕೋಟೆ ಜಿಲ್ಲೆಯ ಮಧೋಳ ತಾಲೂಕಿನ ಕುಳಲಿ ಗ್ರಾಮದ ಸಮೀಪ ಶುಗರ್​ ಪ್ಯಾಕ್ಟರಿಯಲ್ಲಿ ಡಿಸಲ್ಟರಿ ಘಟಕದ ಬಾಯ್ಲರ್​​ ಸ್ಫೋಟಗೊಂಡು ಆರು ಮಂದಿ ಸಾವನ್ನಪ್ಪಿ, ಎಂಟು ಮಂದಿ ಗಾಯಗೊಂಡಿದ್ದರು. ದುರಂತಕ್ಕೆ ಸಂಬಂಧಿಸಿದಂತೆ ಫ್ಯಾಕ್ಟರಿಯ ಮಾಲೀಕ ಮಾಜಿ ಸಚಿವ ಮುರುಗೇಶ್ ನಿರಾಣಿ, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಘಟನೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಮುರುಗೇಶ್ ನಿರಾಣಿ, ‘ಮಿಥನಾಲ್ ಹೊರಗಡೆ ಹೋಗದೇ ಇರೋದ್ರಿಂದ ಘಟನೆ ನಡೆದಿದೆ. ಮೃತಪಟ್ಟವರ ಕುಟುಂಬಗಳಿಗೆ ಜೀವ ವಿಮೆ ಅನುಕೂಲ‌ ಮಾಡಿಸಿಕೊಡುತ್ತೇನೆ. ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದೇನೆ. ಮೃತಪಟ್ಟವರ ಕುಟುಂಬಸ್ಥರಲ್ಲಿ ಯಾರಾದ್ರೂ ನಮ್ಮ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮನಸ್ಸಿದ್ದರೆ, ಅವರ ವಿದ್ಯಾರ್ಹತೆ ಅನುಗುಣವಾಗಿ ಕೆಲಸ‌ ನೀಡುತ್ತೇನೆ. ಘಟನೆಯಲ್ಲಿ‌ ಆರು ಜನ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ಹಾಜರಾತಿ ಪ್ರಕಾರ ಮೃತರ ಸಂಖ್ಯೆ ಹೆಚ್ಚಾಗುವ ಆಗುವ ಸಾಧ್ಯತೆ ಇಲ್ಲ. ಆದರೂ ಯಾರಾದರು ಸಿಲುಕಿದ್ದರೆ ಅನ್ನೋ ದೃಷ್ಟಿಯಿಂದ ತೆರವು ಕಾರ್ಯಾಚರಣೆ ನಡೆದಿದೆ. ಸೇಫ್ಟಿ ವಾಲ್ ವರ್ಕ್ ಆಗಿಲ್ಲ ಹಾಗೂ ನಮಗೆ ಆಗದೇ ಇರೋ ಕಿಡಿಗೇಡಿಗಳು ಈ ದುಷ್ಕೃತ್ಯ ಮಾಡಿರುವ ಶಂಕೆ ಇದೆ. ಸಂಪೂರ್ಣ ತನಿಖೆಯ ನಂತರ ಪ್ರತಿಕ್ರಿಯಿಸುವೆ ಎಂದರು.

About the author

ಕನ್ನಡ ಟುಡೆ

Leave a Comment