ರಾಜ್ಯ ಸುದ್ದಿ

ಮುಸ್ಲಿಂ ಆಗಿ ಹುಟ್ಟಿದ್ದರೂ ನಾವೆಲ್ಲರೂ ಹೆಮ್ಮೆಯ ಭಾರತೀಯರು: ಅನಂತ್ ಕುಮಾರ್ ಹೆಗಡೆ ವಿರುದ್ಧ ತಬೂ ರಾವ್ ಕಿಡಿ

ಬೆಂಗಳೂರು:  ಕೆಪಿಸಿಸಿ  ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಮುಸ್ಲಿಂ  ಹೆಂಗಸಿನ ಹಿಂದೆ ಓಡಿ ಹೋದವನು  ಎಂದೆಲ್ಲ ಹೀಯಾಳಿಸಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮಾಡಿರುವ ಟ್ವೀಟ್ ಗೆ ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ ಕಿಡಿಕಾರಿದ್ದಾರೆ. ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಮತ್ತು ಶೋಭಾ ಕರಂದ್ಲಾಜೆ ಬಳಿಕ ಇದೀಗ ಅನಂತ ಕುಮಾರ್ ಅವರ ಸರದಿ ಬಂದಂತೆ ಇದೆ. ನಾನು ಖಂಡಿತ ರಾಜಕಾರಣಿ ಅಲ್ಲ, ನಾನು ಒಬ್ಬ ಖಾಸಗಿ ವ್ಯಕ್ತಿ, ಮೇಲಾಗಿ  ಎರಡು ಮಕ್ಕಳ ತಾಯಿ ಮತ್ತು ಗೃಹಿಣಿ ,ನಾನು ಯಾವುದೇ ಪಕ್ಷ ಅಥವಾ ಸಾರ್ವಜನಿಕ ಸ್ಥಾನಗಳನ್ನು ಹೊಂದಿಲ್ಲ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೌದು ನಾನು ಜನ್ಮತ: ಮುಸ್ಲಿಂ ಆಗಿ  ಹುಟ್ಟುದ್ದೇನೆ. ಆದರೆ, ನಾವೆಲ್ಲರೂ ಭಾರತೀಯರೆಂಬ ಹೆಮ್ಮೆ ಇದೆ.  ಪ್ರತಿಯೊಬ್ಬರಿಗೂ  ಮುಕ್ತ ಚಿಂತನೆ, ಅಭಿವ್ಯಕ್ತಿ, ನಂಬಿಕೆಯ ಜಾತ್ಯತೀತ ತತ್ವದ ಆಧಾರದ ಮೇಲೆ ಭಾರತೀಯ ಸಂವಿಧಾನ ರೂಪುಗೊಂಡಿದೆ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಯಾವುದೇ ರೀತಿಯ ವೈಯಕ್ತಿಕ ಹೇಳಿಕೆ ನೀಡುವುದಿಲ್ಲ, ಇಂತಹ ಕೀಳುಮಟ್ಟದ ರಾಜಕೀಯವನ್ನು ಖಂಡಿಸುತ್ತೇನೆ. ಒಂದು ವೇಳೆ ಅವರಿಗೆ ತಾಕತ್ತು ಇದ್ದರೆ  ರಾಜಕೀಯದಲ್ಲಿ ತಮ್ಮ ಪತಿಯನ್ನು ಎದುರುಸಲಿ. ಇಂತಹ ಪ್ರಚೋದನಾಕಾರಿ ಹೇಳಿಕೆಗಳು ಕೇಂದ್ರ ಸಚಿವರಿಗೆ ಶೋಭೆ ತರುವಂತಹದ್ದಲ್ಲ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment