ರಾಜಕೀಯ

ಮುಸ್ಲಿಂ ಹೇಗೆ ಬ್ರಾಹ್ಮಣನಾಗುತ್ತಾನೆ: ರಾಹುಲ್ ಗಾಂಧಿಗೆ ಸಚಿವ ಅನಂತ ಕುಮಾರ್

ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಚಾರದ ಕಾವು ತೀವ್ರತೆ ಪಡೆಯುತ್ತಿದೆ. ಅದರ ಜತೆಗೆ ರಾಜಕೀಯ ನಾಯಕರ ವಾಗ್ದಾಳಿ ಕೂಡ ಎಲ್ಲೆ ಮೀರಿ ಹರಿಯುತ್ತಿದೆ. ಸದಾ ವಿವಾದಾತ್ಮಕ, ಪ್ರಚೋದನಾತ್ಮಕ ಹೇಳಿಕೆಗಳಿಂದಲೇ ಗಮನ ಸೆಳೆಯುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮತ್ತೀಗ ಹೊಸ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಟು ವಾಖ್ ಪ್ರಹಾರ ನಡೆಸಿರುವ ಅವರು ಮುಸ್ಲಿಂ ಹುಡುಗ ಬ್ರಾಹ್ಮಣ ಹೇಗಾಗುತ್ತಾನೆ ಎಂದು ಪ್ರಶ್ನಿಸಿದ್ದಾರೆ.

ಬಾಲಾಕೋಟ್ ಏರ್‌ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೇಳುತ್ತಿರುವ ಕಾಂಗ್ರೆಸ್‌ಗೆ ಪ್ರತಿ ಏಟು ನೀಡಿದ ಹೆಗಡೆ, ತಾನು ಬ್ರಾಹ್ಮಣ ಎಂದು ಸಾಬೀತು ಪಡಿಸಲು ರಾಹುಲ್ ಗಾಂಧಿ ಡಿಎನ್‌ಎ ಸಾಕ್ಷ್ಯ ನೀಡುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಬಾಲಾಕೋಟ್ ದಾಳಿ ಬಳಿಕ ವಿಶ್ವದಾದ್ಯಂತ ನಮ್ಮ ಸಾಹಸ ಮತ್ತು ತಾಕತ್ತಿನ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಕಾಂಗ್ರೆಸ್ಸಿನವರಿಗೆ ಭಾರತೀಯ ವಾಯುಸೇನೆಯ ಕಾರ್ಯಾಚರಣೆಯ ಸಾಕ್ಷ್ಯಿ ಬೇಕಾಗಿದೆ. ಹೀಗಾಗಿ ನಾವು ಕೂಡ ಪ್ರಶ್ನಿಸಬೇಕಾಗಿದೆ. ಒಬ್ಬ ಮುಸ್ಲಿಂ ಹುಡುಗ ಗಾಂಧಿ ಎಂಬ ಅಡ್ಡ ಹೆಸರಿನಿಂದ ಬ್ರಾಹ್ಮಣ ಹೇಗಾದ. ಅವರೊಬ್ಬ ಪರದೇಸಿ. ತಾನು ಬ್ರಾಹ್ಮಣ ಎಂದು ಸಾಬೀತು ಪಡಿಸಲು ಅವರು ಡಿಎನ್‌ಎ ಪರೀಕ್ಷೆ ನಡೆಸಲು ಸಿದ್ಧರಿದ್ದಾರಾ ಎಂದವರು ಕೇಳಿದ್ದಾರೆ. ಹೆಗಡೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ರಾಹುಲ್ ಮುಸಲ್ಮಾನ ಮತ್ತು ಕ್ರಿಶ್ಚಿಯನ್‌ರಿಂದ ಹುಟ್ಟಿದ ಹೈಬ್ರಿಡ್ ಎಂದವರು ಹಿಂದೆ ಹೇಳಿದ್ದರು.

About the author

ಕನ್ನಡ ಟುಡೆ

Leave a Comment