ಕ್ರೀಡೆ

ಮೂರನೇ ಟೆಸ್ಟ್: ಬುಮ್ರಾ ದಾಳಿಗೆ ನಡುಗಿದ ಆಸೀಸ್‌ 151ಕ್ಕೆ ಆಲೌಟ್‌

ಮೆಲ್ಬರ್ನ್: ಆಸೀಸ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ 2 ನೇ ದಿನದಾಟದಲ್ಲಿ 1ನೇ ಇನ್ನಿಂಗ್ಸ್ ನ್ನು  7 ವಿಕೆಟ್‌ ನಷ್ಟಕ್ಕೆ 443 ರನ್‌ಗಳಿಗೆ ಡಿಕ್ಲೇರ್‌  ಮಾಡಿಕೊಂಡಿದ್ದ ಕೊಹ್ಲಿ ಪಡೆ ಶುಕ್ರವಾರ ಬಿಗಿ ದಾಳಿ ನಡೆಸುವ ಮೂಲಕ ಆಸೀಸನ್ನು ಕೇವಲ 151 ರನ್‌ಗಳಿಗೆ ನಿಯಂತ್ರಿಸಿದೆ.

ಆಸೀಸ್‌ ಪರ  ಮಾರ್ಕಸ್‌ ಹ್ಯಾರಿಸ್‌ 22 , ಉಸ್ಮಾನ್‌ ಖ್ವಾಜಾ 21, ಶಾನ್‌ ಮಾರ್ಶ್‌ 19, ಟ್ರಾವಿಸ್‌ ಹೆಡ್‌ 20, ಟಿಮ್‌ ಪೇಯ್ನ 22, ಪ್ಯಾಟ್‌ ಕ್ಯುಮಿನ್ಸ್‌ 17 ರನ್‌ಗಳಿಸಿದೆ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ. ಭಾರತದ ಪರ ಬಿಗಿ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 33 ಕ್ಕೆ 6 ವಿಕೆಟ್‌ ಕಿತ್ತು ಗಮನ ಸೆಳೆದರು. ಜಡೇಜಾ 2 , ಇಶಾಂತ್‌ ಶರ್ಮಾ ಮತ್ತು ಶಮಿ ತಲಾ 1 ವಿಕೆಟ್‌ ಪಡೆದರು.

 

About the author

ಕನ್ನಡ ಟುಡೆ

Leave a Comment