ರಾಜಕೀಯ

ಮೂರನೇ ದಿನಕ್ಕೆ ಮುಖ್ಯಮಂತ್ರಿ ರೆಸಾರ್ಟ್​ ರಾಜಕೀಯ

ಮೈಸೂರು: ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ರೆಸಾರ್ಟ್​ ರಾಜಕೀಯ ಮೂರನೇ ದಿನವೂ ಮುಂದುವರಿದಿದೆ. ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ವೆಂಕಟೇಶ್, ಕಾಂಗ್ರೆಸ್ ಮುಖಂಡ ಮರಿಗೌಡ ಮತ್ತಿತರರು ಸಿದ್ದರಾಮಯ್ಯನವರ ಜತೆ ಇದ್ದಾರೆ.

ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿರುವ ಸೆರಾಯ್​ ರೆಸಾರ್ಟ್​ನಲ್ಲಿ ಮೂರು ದಿನಗಳಿಂದ ಬೀಡು ಬಿಟ್ಟಿರುವ ಸಿಎಂ ಮತ್ತಿತರ ಮುಖಂಡರು ಶುಕ್ರವಾರ ಇಡೀದಿನ ಅಲ್ಲಿಂದ ಹೊರಗೆಲ್ಲೂ ಹೋಗಿಲ್ಲ. ಆಪ್ತರ ಜತೆಯಷ್ಟೇ ಮಾತುಕತೆ ನಡೆಸಿದ್ದರು. ಇಂದು ಮಧ್ಯಾಹ್ನ 12ಗಂಟೆ ಬಳಿಕ ರೆಸಾರ್ಟ್​ ಬಿಟ್ಟು ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment