ಸುದ್ದಿ

ಮೂರು ಮಕ್ಕಳ ಜತೆ ರೈಲಿಗೆ ತಲೆಕೊಟ್ಟ ತಾಯಿ

ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ಮೂವರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರು ಜಿಲ್ಲೆಯ ಇಂಡಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಇಂಡಿ ತಾಲೂಕಿನ ಸಾತಪುರ ಗ್ರಾಮದ ಲಕ್ಷ್ಮೀ ಪ್ರಕಾಶ ಬೂದಿಹಾಳ ತಾಯಿಯ ಜೊತೆ ಮಕ್ಕಳಾದ  ಬೀರಪ್ಪ ಮತ್ತು ಅಂಕುಶ ಸಾವಿಗೀಡಾದ ದುರ್ದೈವಿಗಳು. ಭೀಕರ ಘಟನೆಯಲ್ಲಿ ಇನ್ನೋಬ್ಬ ಬಾಲಕಿ ದಾನಮ್ಮ ಸಾವಿನಿಂದ ಪಾರಾಗಿದ್ದಾರೆ.

ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ದುರ್ಘಟನೆ ನಡೆದಿದ್ದ ರೈಲ್ವೆ ಇಲಾಖೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

About the author

ಕನ್ನಡ ಟುಡೆ

Leave a Comment