ರಾಷ್ಟ್ರ

ಮೂಲ ಸೌಕರ್ಯದ್ದೇ ಕೊರತೆ: ಭಾರತದ ಗಡಿಯೊಳಗೆ ‘ವೆಲ್‌ಕಂ ಟು ಚೈನಾ’ ಸಂದೇಶ

ಕಿಬಿತು/ಕಹೋ (ಅರುಣಾಚಲ ಪ್ರದೇಶ):  ಚೀನಾ ಗಡಿಯತ್ತ (ವಾಸ್ತವಿಕ ನಿಯಂತ್ರಣ ರೇಖೆ) ಕಡಿದಾದ, ದುರ್ಗಮ ಮಾರ್ಗಗಳಲ್ಲಿ ಸಂಚರಿಸುವಾಗ ಇದ್ದಕ್ಕಿದ್ದಂತೆ ಮೊಬೈಲ್‌ ಫೋನ್‌ಗಳಲ್ಲಿ ‘ವೆಲ್‌ಕಮ್ ಟು ಚೈನಾ’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಹಲವು ಗಂಟೆಗಳ ಕಾಲ ಸಿಗ್ನಲ್‌ ಇಲ್ಲದೆ ‘ಸತ್ತುಹೋದ’ ಮೊಬೈಲ್‌ಗಳಿಗೆ ಚೀನಾದಿಂದ ಹರಿದುಬರುವ ಸಿಗ್ನಲ್‌ಗಳು ಜೀವ ತುಂಬುತ್ತವೆ.

ಚೀನೀ ಭಾಷೆಯ ಅಕ್ಷರಗಳೂ ಮೊಬೈಲ್‌ ಪರದೆಯ ಮೇಲೆ ಧುಮುಗುಡುತ್ತವೆ. ಇದ್ದಕ್ಕಿದ್ದಂತೆ ಮೊಬೈಲ್‌ ಸಮಯವೂ ಚೀನೀ ಸಮಯಕ್ಕೆ ಹೊಂದಿಕೊಳ್ಳುತ್ತದೆ. (ಚೀನಾದ ಕಾಲಮಾನ ಭಾರತೀಯ ಕಾಲಮಾನಕ್ಕಿಂತ ಎರಡೂ ವರೆ ಗಂಟೆ ಮುಂದಿದೆ.) ಎಲ್‌ಎಸಿ ಆಚೆಗೆ ಚೀನಾದ ಪೀಪಲ್ಸ್‌ ಲಿಬರೇಶನ್ ಅರ್ಮಿ (ಪಿಎಲ್‌ಎ)ಯ ಬೃಹತ್‌ ಬಹುಮಹಡಿ ಕಟ್ಟಡವೂ ಕಣ್ಣಿಗೆ ಬೀಳುತ್ತದೆ. ಅದರಾಚೆಗೆ ಉತ್ತಮ ಗುಣಮಟ್ಟದ, ಅಗಲವಾದ ರಸ್ತೆಯೂ ಕಾಣಿಸುತ್ತದೆ

‘ಆದರೆ ನಮ್ಮ ಭಾಗದಲ್ಲಿ ಯಾವುದೇ ಸಂಪರ್ಕವಿಲ್ಲ, ರಸ್ತೆಯೂ ಇಲ್ಲ, ಮೊಬೈಲೂ ಸಿಗ್ನಲ್‌ಗಳೂ ಇಲ್ಲ. ಇದು ಮಾನಸಿಕವಾಗಿ ತೀವ್ರ ಕಿರಿಕಿರಿಯುಂಟುಮಾಡುತ್ತದೆ. ಗಾಯಗೊಂಡ ಸೈನಿಕರನ್ನು ತೆರವುಗೊಳಿಸುವುದೂ ಬಹುದೊಡ್ಡ ಸವಾಲಾಗಿದೆ. ಯಾಕೆಂದರೆ ತೇಜು- ಕಿಬಿತು ನಡುವಣ ದುರ್ಗಮ ರಸ್ತೆಯಲ್ಲಿ ಆಗಾಗ್ಗೆ ಭೂಕುಸಿತ ಸಂಭವಿಸುತ್ತಿರುತ್ತದೆ’ ಎಂದು ಭಾರತೀಯ ಸೇನಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ. ಈಶಾನ್ಯ ಪ್ರಾಂತ್ಯಗಳ ಪೂರ್ವದ ಬಗೆಹರಿಯದ ಗಡಿಯಾಚೆಗೆ ಪಿಎಲ್‌ಎ ಸೈನಿಕರ ಚಲನವಲನಗಳ ಬಗ್ಗೆ ನಿಗಾ ವಹಿಸುವ ಹೊಣೆ ಹೊತ್ತವರು ಅವರು.

About the author

ಕನ್ನಡ ಟುಡೆ

Leave a Comment