ರಾಜ್ಯ ಸುದ್ದಿ

ಮೂಲ ಸೌಕರ್ಯದ ಕೊರತೆ: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಮತದಾನ ಬಹಿಷ್ಕಾರ

ರಾಮನಗರ: ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಅವರ ತವರು ಜಿಲ್ಲೆಯ ರಾಮನಗರದ ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಗ್ರಾಮಸ್ಥರು ಲೋಕಸಭಾ ಚುನಾವಣೆಗೆ  ಮತದಾನ ಬಹಿಷ್ಕಾರ ಘೋಷಿಸಿದ್ದಾರೆ. ಹಲವು ವರ್ಷಗಳಿಂದ ಗ್ರಾಮದ ರಸ್ತೆ, ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಪ್ರತಿ‌ ಚುನಾವಣೆ ಸಮಯದಲ್ಲೂ ಸುಳ್ಳು ಆಶ್ವಾಸನೆ ಕೊಟ್ಟು ಮೋಸ ಮಾಡುತ್ತಿದ್ದಾರೆ. ಯಾವುದೇ ಜನಪ್ರತಿನಿಧಿ ಬಂದರೂ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಗ್ರಾಮ ಅಭಿವೃದ್ಧಿ ಪಡಿಸುವ ಜನಪ್ರತಿನಿಧಿಗೆ ನಾವು ಮತ ಹಾಕುತ್ತೇವೆ. ಇಲ್ಲವಾದರೆ ಯಾವುದೇ ರಾಜಕಾರಣಿಗಳಿಗೂ ನಮ್ಮ‌ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಗ್ರಾಮಸ್ಥರು ಬ್ಯಾನರ್‌ ಹಾಕಿ ಆಕ್ರೋಶ ಪ್ರದರ್ಶಿಸಿದ್ದಾರೆ. ‘ಕೂಡಲೇ ನಮ್ಮ‌ ಗ್ರಾಮ ಅಭಿವೃದ್ಧಿ ಮಾಡಿ ಕೊಡಬೇಕು. ಈ‌ ಬಾರಿ ನಮ್ಮ ಗ್ರಾಮದಿಂದ ಯಾವುದೇ ವ್ಯಕ್ತಿ ಮತ ಚಲಾವಣೆ ಮಾಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

 

About the author

ಕನ್ನಡ ಟುಡೆ

Leave a Comment