ರಾಷ್ಟ್ರ ಸುದ್ದಿ

ಮೃತದೇಹಗಳನ್ನು ವಶಕ್ಕೆ ಪಡೆಯುವಂತೆ ಶೀಘ್ರದಲ್ಲೇ ಪಾಕ್ ಗೆ ತಿಳಿಸುತ್ತೇವೆ: ಭಾರತೀಯ ಸೇನೆ

ಶ್ರೀನಗರ: ಸೈನಿಕರ ವೇಷ ಧರಿಸಿ ಗಡಿ ನುಸುಳಲು ಯತ್ನಿಸುತ್ತಿದ್ದ ಇಬ್ಬರು ನುಸುಳುಕೋರರನ್ನು ಹತ್ಯೆ ಮಾಡಲಾಗಿತ್ತು, ಮೃತದೇಹಗಳನ್ನು ವಶಕ್ಕೆ ಪಡೆಯುವಂತೆ ಶೀಘ್ರದಲ್ಲಿಯೇ ಪಾಕಿಸ್ತಾನಕ್ಕೆ ತಿಳಿಸಲಾಗುವುದು ಎಂದು ಭಾರತೀಯ ಸೇನೆ ಸೋಮವಾರ ಹೇಳಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸೇನಾ ವಕ್ತಾರರು, ನೌಗಾಮ್ ಸೆಕ್ಟರ್ ಬಳಿರುವ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳುತ್ತಿದ್ದ ಇಬ್ಬರು ನುಸುಳುಕೋರರನ್ನು ಹತ್ಯೆ ಮಾಡಲಾಗಿದೆ. ಕತ್ತಲೆಯಿದ್ದ ಕಾರಣ ಇದರ ಲಾಭ ಪಡೆಯಲು ನುಸುಳುಕೋರರು ಯತ್ನ ನಡೆಸಿದ್ದರು. ಇದರಂತೆ ಗಡಿ ನುಸುಳಲು ಯತ್ನಿಸಿದ್ದರು. ಈ ವೇಳೆ ದಿಟ್ಟ ಉತ್ತರವನ್ನು ನೀಡಿದ ಸೇನೆ ಇಬ್ಬರು ನುಸುಳುಕೋರರನ್ನು ಹತ್ಯೆ ಮಾಡಿದೆ ಎಂದು ಹೇಳಿದ್ದಾರೆ. ಸ್ಥಳ ಅತ್ಯಂತ ಸೂಕ್ಷ್ಮವಾಗಿದ್ದು, ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಹವಾಮಾನ ವೈಪರೀತ್ಯದಿಂದಾಗಿ ಕೆಲ ನುಸುಳುಕೋರರು ತಪ್ಪಿಸಿಕೊಂಡಿರುವ ಸಾಧ್ಯತೆಗಳಿವೆ. ನುಸುಳುಕೋರರು ಪಾಕಿಸ್ತಾನದ ಸೈನಿಕರಂತೆ ವೇಷಗಳನ್ನು ಧರಿಸಿದ್ದರು. ಇನ್ನೂ ಕೆಲ ನುಸುಳುಕೋರರು ಹಳೆಯ ಭಾರತೀಯ ಸೇನೆಯ ಸಮವಸ್ತ್ರಗಳನ್ನು ಧರಿಸಿದ್ದರು. ನುಸುಳುಕೋರರಿಗೆ ಪಾಕಿಸ್ತಾನ ಸಂಪೂರ್ಣ ಬೆಂಬಲ ನೀಡಿದ್ದು, ಮೃತದೇಹಳನ್ನು ತೆಗೆದುಕೊಂಡು ಹೋಗುವಂತೆ ಅವರಿಗೆ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment