ಸುದ್ದಿ

ಮೆಜೆಸ್ಟಿಕ್ ನಮ್ಮದಲ್ಲ, ನಿಮ್ಮದು; ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಮಾತಿಗೆ ಮನಸೋತ ಬೀದಿ ವ್ಯಾಪಾರಿಗಳು!

ಬೆಂಗಳೂರು; ಕರ್ನಾಟಕದ ದಿಟ್ಟ ಹಾಗೂ ನಿಷ್ಟಾವಂತ ಐಪಿಎಸ್ ಅಧಿಕಾರಿ ಎಂದೇ ಖ್ಯಾತಿ ಪಡೆಯುತ್ತಿರುವ ರವಿ ಚನ್ನಣ್ಣನವರ್ ಅವರು ಈಗಾಗಲೇ ಮೈಸೂರು ಹಾಗೂ ಶಿವಮೊಗ್ಗದ ಲಕ್ಷಾಂತರ ಜನರ ಅಭಿಮಾನವನ್ನು ಗಳಿಸಿದ್ದು, ಇದೀಗ ತಮ್ಮ ಶಕ್ತಿಯುತ ಮಾತನಿಂದಾಗಿ ಬೆಂಗಳೂರಿಗರ ಮನವನ್ನೂ ಗೆದ್ದಿದ್ದಾರೆ.
ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಚೆನ್ನಣ್ಣನವರ್ ಅವರು, ಬೀದಿ ವ್ಯಾಪಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ನಡೆಸಿದ ಸಭೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರವಿ ಅವರ ಮಾತುಗಳಿಗೆ ಬೆಂಗಳೂರು ಜನತೆ ಮನಸೋತಿದ್ದಾರೆ.
ವಿಡಿಯೋದಲ್ಲಿರುವ ಪ್ರಕಾರ ಬೀದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿರುವ ರವಿ ಚನ್ನಣ್ಣನವರ್ ಅವರು, ಬೆಂಗಳೂರಿನಲ್ಲಿ ಯಾರೂ ಭಯದಿಂದ ಬದುಕುವ ವಾತಾರವಣ ಇರಬಾರದು. ಈ ಮೆಜೆಸ್ಟಿಕ್ ನಮ್ಮದಲ್ಲ. ಮೆಜೆಸ್ಟಿಕ್ ಇರುವುದು ನಿಮ್ಮಿಂದಲೇ ಹೊರತು, ನಮ್ಮಿಂದಲ್ಲ. ಮೆಜೆಸ್ಟಿಕ್ ನಿಮ್ಮದು ಎಂದು ಬೀದಿ ವ್ಯಾಪಾರಿಗಳಿಗೆ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment