ಸಿನಿ ಸಮಾಚಾರ

ಮೆಜೆಸ್ಟಿಕ್ ನ ಕಥೆಯಿದು ಯೋಗಿ ದುನಿಯಾ

ಬೆಂಗಳೂರು: ದುನಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿದ್ದ ನಿರ್ದೇಶಕ ಸೂರಿ ಮತ್ತೆ ಇನ್ನೊಂದು ಅಂತಹ ಸಿನಿಮಾ ಮಾಡುವುದು ಅಸಾಧ್ಯ ಎಂದಿದ್ದರು. ಆದರೆ ಹೊಸ ನಿರ್ದೇಶಕ ಹರಿ ಅದರ ಮುಂದುವರಿದ ಭಾಗವನ್ನು ತಯಾರಿಸುವ ಪ್ರಯತ್ನ ಮಾಡಿದ್ದಾರೆ ಅದರಲ್ಲಿ ಯೋಗಿ ನಾಯಕನಾಗಿ ನಟಿಸಿದ್ದಾರೆ.

ಈ ವಾರ ಚಿತ್ರ ತೆರೆಗೆ ಬರಲಿದ್ದು ನಿರ್ದೇಶಕ ಹರಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಭೂಗತ ಜಗತ್ತಿನ ಕಥೆ ಹೊಂದಿದ ದುನಿಯಾ ಸಿನಿಮಾ 2007ರಲ್ಲಿ ಬಿಡುಗಡೆಯಾಯಿತು. ಆ ಚಿತ್ರದ ರೀತಿ ನನ್ನ ಚಿತ್ರವಿರುವುದಿಲ್ಲ.ಸೂರಿ ದುನಿಯಾ ರೀತಿಯಲ್ಲಿ ನಾನು ಈ ಚಿತ್ರವನ್ನು ಮಾಡಲು ಪ್ರಯತ್ನಿಸಿಲ್ಲ. ನನ್ನ ದುನಿಯಾ ಮುಂದುವರಿದ ಚಿತ್ರ ಜೂಜಿಗೆ ಸಂಬಂಧಪಟ್ಟದ್ದು ಎನ್ನುತ್ತಾರೆ.

ಬೆಂಗಳೂರಿನ ಅತ್ಯಂತ ಜನವಿರುವ ಪ್ರೇದಶ ಮೆಜೆಸ್ಟಿಕ್ ನ್ನು ಸೆರೆಹಿಡಿಯಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅದು ರಾತ್ರಿ ವೇಳೆಯಲ್ಲಿ ಪ್ರತಿ ರಾತ್ರಿ ಮೆಜೆಸ್ಟಿಕ್ ಸುತ್ತಮುತ್ತ ಹತ್ತು ಹಲವು ಆಸಕ್ತಿಕರ ವಿಷಯಗಳು ಇಲ್ಲಿ ಸಿಗುತ್ತವೆ. ಅವರ ಜೀವನ ಹೇಗಿರುತ್ತದೆ ಎಂದು ತಿಳಿಯಲು ಪ್ರಯತ್ನಿಸಿದ್ದೇನೆ. ಮೆಜೆಸ್ಟಿಕ್ ನ್ನು ತಮ್ಮ ನೆಲೆಯಾಗಿ ಮಾಡಿಕೊಂಡಿರುವ ಜನರ ಜೀವನದ ಬಗ್ಗೆ ದುನಿಯಾ 2 ಚಿತ್ರವಿದೆ ಎನ್ನುತ್ತಾರೆ.

ಇಲ್ಲಿಯೇ ಜನ ಪ್ರಯಾಣವನ್ನು ಆರಂಭಿಸುವುದು ಮತ್ತು ಕೊನೆಗೊಳಿಸುವುದು. ಇಲ್ಲಿಗೆ ಬರುವಾಗ ಖಾಲಿಯಾಗಿ ಬರುತ್ತೇವೆ ಹೋಗುವಾಗ ಹಲವು ನೆನಪುಗಳಿರುತ್ತವೆ. ಮೆಜೆಸ್ಟಿಕ್ ಪ್ರದೇಶದಲ್ಲಿಯೇ ಹುಟ್ಟಿ ಬೆಳೆದ ನಿರ್ದೇಶಕ ಹರಿ ಇಲ್ಲಿನ ಪಾತ್ರಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. ಇಲ್ಲಿ ಪ್ರಯಾಣಿಕರು, ಜೂಜುಕೋರರು, ಜೋಡಿಗಳು ಇರುತ್ತಾರೆ. ಯೋಗಿಯವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಮಾನ್ಯ ಹುಡುಗನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಹಿತಾ ಚಂದ್ರಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ್ ನಾಯ್ಕ್ ಅವರ ಛಾಯಾಗ್ರಹಣ ಮತ್ತು ಬಿಜೆ ಭರತ್ ಅವರ ಸಂಗೀತವಿದೆ.

 

About the author

ಕನ್ನಡ ಟುಡೆ

Leave a Comment