ಕ್ರೀಡೆ

ಆಸ್ಟ್ರೇಲಿಯಾ – ಭಾರತ 2ನೇ ಟಿ-20 ಪಂದ್ಯ, ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ಕೆ

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು , ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ಇಂದು ಸಹ ಸ್ವಲ್ಪ  ಮಳೆ ಹನಿ ಬಿದ್ದರೂ ಕೂಡಾ ನಿಗದಿತ ಅವಧಿಗೆ ಪಂದ್ಯ ಆರಂಭವಾಗಿದೆ.

ಕೊನೆಯ ಹಂತದಲ್ಲಿ ಮೊದಲ ಪಂದ್ಯ ಕೈ ಚೆಲ್ಲಿದ್ದ ಟೀಂ ಇಂಡಿಯಾ ಆಟಗಾರರು ಇಂದಿನ  ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುವ ತಯಾರಿ ನಡೆಸಿದ್ದಾರೆ. ಮತ್ತೊಂದೆಡೆ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಳ್ಳಲು ಕಾಂಗರೂ ಪಡೆ ಸಜ್ಜಾಗಿದೆ.
ಟೀಂ ಇಂಡಿಯಾ ಇಂತಿದೆ.  ನಾಯಕ ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ, ಶಿಖರ್ ಧವನ್,  ಕೆ.ಎಲ್. ರಾಹುಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್ಪ್ರೀತ್ ಬ್ರೂಮಾ, ಖಲೀಲ್ ಅಹ್ಮದ್ ಇದ್ದಾರೆ.
ಆಸ್ಟ್ರೇಲಿಯಾ ತಂಡ ಇಂತಿದೆ.  ಅರೊನ್ ಪಿಂಚ್, ಡಿ ಆರ್ಕಿ ಸಾರ್ಟ್ , ಕ್ರಿಸ್ ಲ್ಯಾನ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೊಯಿನಿಸ್, ಬೆನ್ ಮ್ಯಾಕ್ ಡಾರ್ಮೊಟೋ,  ಅಲೆಕ್ಸ್ ಕ್ಯಾರಿ, ನಾಥನ್ ಕೌಟರ್ ನೈಲ್, ಆಂಡ್ರ್ಯೂ ಟೈ, ಅಡಾಮ್ ಜಾಂಪಾ, ಬೆಹೆಂಡ್ರೋರ್ಫ್  ಇದ್ದಾರೆ.

About the author

ಕನ್ನಡ ಟುಡೆ

Leave a Comment