ಕ್ರೀಡೆ

ಮೆಲ್ಬೋರ್ನ್ ಟೆಸ್ಟ್ ಗೆ ಕುಂಬ್ಳೆ ಆಯ್ಕೆಯ ಭಾರತ ತಂಡ ಹೀಗಿರುತ್ತಿತ್ತು

ಡಿ.26 ರಿಂದ ಪ್ರಾರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ 3 ನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಮಯಾಂಕ್ ಅಗರ್ವಾಲ್ ಸೇರ್ಪಡೆಯನ್ನು ಬೆಂಬಲಿಸಿದ್ದಾರೆ.
ನಾನು ತಂಡವನ್ನು ಆಯ್ಕೆ ಮಾಡಿದ್ದರೆ ಅದರಲ್ಲಿ ಖಂಡಿತವಾಗಿಯೂ ಮಯಾಂಕ್ ಅಗರ್ವಾಲ್ ಇರುತ್ತಿದ್ದರು. ತಂಡದಲ್ಲಿ ಯುವಕರಿಗೆ ಅವಕಾಶ ನೀಡುವುದು ನಿಜಕ್ಕೂ ಉತ್ತಮವಾದದ್ದು, ನಾವು ಹನುಮವಿಹಾರಿ, ಕುಲ್ ದೀಪ್ ಯಾದವ್, ರಿಷಬ್ ಪಂತ್ ಕ್ಷಮತೆಯನ್ನು ನೋಡಿದ್ದೇವೆ ಎಂದಾದ ಮೇಲೆ ಮಯಾಂಕ್ ಅಗರ್ವಾಲ್ ಗೂ ಅವಕಾಶ ನೀಡಬೇಕು ಎಂದು ಕುಂಬ್ಳೆ ಹೇಳಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಹಾಗೂ ಇನ್ನೂ 3 ವೇಗಿಗಳಿಗೆ ತಂಡದಲ್ಲಿ ಸ್ಥಾನ ನೀಡುತ್ತಿದ್ದೆ, ನನಗೆ 5 ಬೌಲರ್ ಗಳು ಬೇಕು, ಏಕೆಂದರೆ ಶಮಿ, ಬೂಮ್ರಾ, ಇಶಾಂತ್ ಈ ಮೂವರು ಬೌಲರ್ ಗಳಿಗೆ ಜೊತೆಯಾಗಿ ಬೌಲರ್ ಗಳಿರಬೇಕು ಅದಕ್ಕಾಗಿ ಇಬ್ಬರು ಸ್ಪಿನ್ನರ್ ಗಳು ಅಂದರೆ ಅಶ್ವಿನ್ ಹಾಗೂ ಜಡೇಜಾ ಅವರನ್ನು ಆಯ್ಕೆ ಮಾಡುತ್ತಿದ್ದೆ. ಅವರು ಬ್ಯಾಟಿಂಗ್ ಸಹ ಉತ್ತಮವಾಗಿ ಆಡಬಲ್ಲರು. ಅವರೇ ನಮ್ಮ ಬಾಟಮ್ 5 ಆಗಲಿದ್ದರು ಎಂದು ಕುಂಬ್ಳೆ ಹೇಳಿದ್ದಾರೆ. ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಟೆಸ್ಟ್ ನಲ್ಲಿ ಭಾರತ 2-1 ಅಂತರದಿಂದ ಗೆಲ್ಲುತ್ತದೆ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿರುವ ವ್ಯಪ್ತಡಿಸಿದ್ದಾರೆ.
ಕುಂಬ್ಳೆ ಆಯ್ಕೆಯ ತಂಡ ಹೀಗಿರಲಿದೆ:
ಮಾಯಾಂಕ್ ಅಗರ್ವಾಲ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಬ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಜಾಸ್ಪ್ರಿತ್ ಬೂಮ್ರಾ

About the author

ಕನ್ನಡ ಟುಡೆ

Leave a Comment