ಕ್ರೀಡೆ

ಮೆಲ್ಬೋರ್ನ್ ಟೆಸ್ಟ್: ಸೌರವ್ ಗಂಗೂಲಿ ದಾಖಲೆ ಮುರಿದ ಚೇತೇಶ್ವರ್ ಪೂಜಾರ ಶತಕ

ಮೆಲ್ಬೋರ್ನ್: ಮೆಲ್ಬೋರ್ನ್ ಟೆಸ್ಟ್ ನಲ್ಲಿ ಚೇತೇಶ್ವರ್ ಪೂಜಾರ ಶತಕ ಸಿಡಿಸಿದ್ದು, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ದಾಖಲೆಗಳನ್ನು ಸರಿಗಟ್ಟಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಡೆದ 3 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದ್ದು, ಕ್ರಿಕೆಟ್ ವೃತ್ತಿ ಜೀವನದ 17 ನೇ ಶತಕ ದಾಖಲಿಸುವ ಮೂಲಕ ಪೂಜಾರ, ಸೌರವ್ ಗಂಗೂಲಿ ಅವರ ದಾಖಲೆ ಮುರಿದಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 16 ಶತಕಗಳನ್ನು ದಾಖಲಿಸಿದ್ದರು. ಇದೇ ವೇಳೆ 17 ಶತಕಗಳನ್ನು ಹೊಂದಿದ್ದ ವಿವಿಎಸ್ ಲಕ್ಷ್ಮಣ್ ಅವರ  ದಾಖಲೆಯೊಂದಿಗೆ ಪೂಜಾರ ಸಮಬಲ ಸಾಧಿಸಿದ್ದಾರೆ. ಚೇತೇಶ್ವರ್ ಪೂಜಾರಾ 112 ಟೆಸ್ಟ್ ಇನ್ನಿಂಗ್ಸ್ ನಲ್ಲಿ 17 ಶತಕ ದಾಖಲಿಸಿದ್ದರು. ವಿವಿಎಸ್ ಲಕ್ಷ್ಮಣ್ 225 ಇನ್ನಿಂಗ್ಸ್ ನಲ್ಲಿ 17 ಶತಕ ದಾಖಲಿಸಿದ್ದರೆ, ಗಂಗೂಲಿ 188 ಟೆಸ್ಟ್ ಇನ್ನಿಂಗ್ಸ್ ನಲ್ಲಿ 16 ಶತಕ ದಾಖಲಿಸಿದ್ದರು.

About the author

ಕನ್ನಡ ಟುಡೆ

Leave a Comment