ರಾಜ್ಯ ಸುದ್ದಿ

ಮೇಕೆದಾಟು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ: ತಮಿಳುನಾಡು ಸಿಎಂಗೆ ಕರ್ನಾಟಕ ಆಹ್ವಾನ

ಮೇಕೆದಾಟು: ಮೇಕೆದಾಟು ಅಣೆಕಟ್ಟು ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸುವ ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿಯವರಿಗೆ ಕರ್ನಾಟಕ ಶುಕ್ರವಾರ ಆಹ್ವಾನ ನೀಡಿದೆ.
ತಮಿಳುನಾಡು-ಕರ್ನಾಟಕ ರಾಜ್ಯಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಹಾಗೂ ರಾಜ್ಯದ ಪಾಲಿಕೆ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಮೇಕೆದಾಟು ಯೋಜನೆಯ ಸ್ಥಳಕ್ಕೆ ನಿನ್ನೆಯಷ್ಟೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಯೋಜನೆ ನಿರ್ಮಾಣ ಮಾಡುತ್ತಿರುವ ಪ್ರಮುಖ ಉದ್ದೇಶವೇ ವಿದ್ಯುತ್ ಉತ್ಪಾದನೆ, ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರು ಪೂರೈಕೆಂ ಎರಡೂ ಕಾರಣಗಳನ್ನೂ ಯೋಜನೆಗೆ ನೀಡಲಾಗಿದ್ದರೂ, ಕುಡಿಯುವ ಉದ್ದೇಶಕ್ಕೆ ಈ ಯೋಜನೆಯ ಅಗತ್ಯವಿಲ್ಲ. ಕಾವೇರಿ ನ್ಯಾಯಾಧೀಕರಣವು ಕುಡಿಯುವ ಉದ್ದೇಶಕ್ಕೆ 18 ಟಿಎಂಸಿ ನೀರು ಹಂಚಿಕೆ ಮಾಡಿದೆ. ಇದರಲ್ಲಿ 4.5 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬೆಂಗಳೂರು ನಗರದ ಜನತೆಗೆ ಪೂರೈಕೆ ಮಾಡಬಹುದು. ಆದರೆ, ಈ ನೀರು ಪೂರೈಕೆ ಮಾಡಲು ಮೇಕೆಂದಾಟು ಯೋಜನೆಯೇ ಆಗತ್ಯವಿಲ್ಲ. ಬೇರೆ ಕಡೆಯಿಂದಲೂ ನೀರು ಪಂಪ್ ಮಾಡಿ ಪೂರೈಸಬಹುದು ಎಂದು ಹೇಳಿದರು.
ಉಳಿದಂತೆ ಮೇಕೆದಾಟು ಯೋಜನೆಯಿಂದ ಒಂದು ಎಕರೆ ನೀರಾವರಿ ಮಾಡಲೂ ಸಹ ಸಾಧ್ಯವಿಲ್ಲ. ಜಲಾಶಯದ ಕೆಳ ಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಕೃಷಿ ನೀರಾವರಿ ಜಮೀನು ಲಭ್ಯವಿಲ್ಲ. ಹೀಗಾಗಿ ನೀರಾವರಿಗೆ ಈ ನೀರು ಬಳಕೆ ಮಾಡಿಕೊಳ್ಳುವುದಿಲ್ಲ. ಇದನ್ನು ತಮಿಳುನಾಡು ಸರ್ಕಾರಕ್ಕೆ ತಿಳಿಸಿದರೂ ಅವರು ಉದ್ದೇಶಪೂರ್ವಕವಾಗಿ ಯೋಜನೆಗೆಂ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿಸಿದರು.
ತಮಿಳುನಾಡು ರಾಜಕೀಯ ನಾಯಕರು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ, ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸರ್ಕಾರ ವಿಶೇಷ ಅಧಿವೇಶನ ಕರೆದಿರುವ ವಿಚಾರ ಸಾಕಷ್ಟು ಅಚ್ಚರಿಯನ್ನುಂಟು ಮಾಡಿದೆ. ಅವರ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ತಮಿಳುನಾಡು ರಾಜ್ಯದ ಮನವೊಲಿಸುವ ವಿಶ್ವಾಸ ನನಗಿದೆ. ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಲು ಈಗಾಗಲೇ ತಮಿಳುನಾಡು ಸಿಎಂ ಒಪ್ಪಿಗೆ ನೀಡಿದ್ದಾರೆ. ಸ್ಥಳ ಪರಿಶೀಲಿಸಲು ಅಲ್ಲಿನ ಎಲ್ಲಾ ರಾಜಕೀಯ ನಾಯಕರನ್ನು ಇಲ್ಲಿಗೆ ಕರೆಸುತ್ತೇನೆ. ಬಳಿಕ ಇದು ನೀರಾವರಿ ಯೋಜನೆಯಲ್ಲ ಕುಡಿಯುವ ನೀರಿನ ಯೋಜನೆ ಎಂಬುದನ್ನು ಅರ್ಥ ಮಾಡಿಸುತ್ತೇನೆಂದಿದ್ದಾರೆ.
ಇದೇ ವೇಳೆ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿರುವ ಕೇಂದ್ರ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ, ತಮಿಳುನಾಡು ಹಾಗೂ ಕರ್ನಾಟಕದ ನಡುವಣ ಎದ್ದಿರುವ ಸಂಶಯಗಳಿಗೆ ತೆರೆಎಳೆಯಲು ಮಧ್ಯೆ ಪ್ರವೇಶ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment