ರಾಷ್ಟ್ರ ಸುದ್ದಿ

ಮೇಕೆದಾಟು ಯೋಜನೆ ಚರ್ಚೆಗೆ ಉಭಯ ಸಿಎಂಗಳ ಸಭೆಗೆ ಒಪ್ಪಿಗೆ

ನವದೆಹಲಿ: ಸಿಎಂ ಕುಮಾರಸ್ವಾಮಿ ಇಂದು ನವದೆಹಲಿಯಲ್ಲಿ ಕೇಂದ್ರ  ಭೂಹೆದ್ದಾರಿ ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ದ್ದಾರೆ. ಉಭಯ ನಾಯಕರು ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಮೇಕೆದಾಟು ಯೋಜನೆ ಸಂಬಂಧ ಚರ್ಚೆ ನಡೆಸಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಉಳುನಾಡು ಮತ್ತೆ ಕ್ಯಾತೆ ತೆಗೆದಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿ ನಡೆಸಲು ಕೇಂದ್ರ ಸಚಿವ ಗಡ್ಕರಿ ಸಮ್ಮತಿಸಿದ್ದಾರೆ. ಮೇಕೆದಾಟು ಯೋಜನೆಯಿಂದಾಗಿ ಎರಡೂ ರಾಜ್ಯಗಳಿಗೆ ಲಾಭವಾಗಲಿದೆ, ಅದರಲ್ಲಿಯೂ ತಮಿಳುನಾಡಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿದ್ದಾರೆ.ಇನ್ನೊಂದೆಡೆ ಮಹದಾಯಿ ವಿಚಾರವಾಗಿ ಗೋವಾ ಸುಪ್ರೀಂ ಕೋರ್ಟ್ ಗೆ ತೆರಳಿರುವ ಕಾರಣ ರಾಜ್ಯದ ಪಾಲಿನ ನೀರು ಬಳಕೆಸಾದ್ಯವಾಗದಂತಾಗಿದೆ. ಈ ಸಂಬಂಧ ಗೋವಾ ಸರ್ಕಾರದ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕೆಂದು ಕುಮಾರಸ್ವಾಮಿ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment