ರಾಜ್ಯ ಸುದ್ದಿ

ಮೇಕೆದಾಟು ಯೋಜನೆ: ವಿರೋಧದ ನಡುವೆ ರಾಜ್ಯದಿಂದ ಸಿಡಬ್ಲ್ಯುಸಿಗೆ ಯೋಜನಾ ವಿವರ ಸಲ್ಲಿಕೆ

ಚೆನ್ನೈ: ಕರ್ನಾಟಕ ಸರ್ಕಾರವು ಉದ್ದೇಶಿತ ಮೇಕೆದಾಟು ಜಲಾಶಯ ಹಾಗೂ ಕುಯ್ಡಿಯುವ ನೀರಿನ ಯೋಜನೆಗಾಗಿ ತಾನು ತಯಾರಿಸಿರುವ ವಿವರವಾದ ಯೋಜನಾ ವರದಿ (ಪ್ರಾಜಕ್ಟ್ ರಿಪೋರ್ಟ್ – ಡಿಪಿಆರ್) ಅನ್ನು ಕೇಂದ್ರ ನೀರಾವರಿ ಆಯೋಗ (ಸೆಂಟ್ರಲ್ ವಾಟರ್ ಕಮಿಷನ್ -ಸಿಡಬ್ಲ್ಯೂಸಿಗೆ ಸಲ್ಲಿಕೆ ಮಾಡಿದೆ.
ಈ ನಿಟ್ಟಿನಲ್ಲಿ ಔಪಚಾರಿಕ ಸಂವಹನವನ್ನು ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜನವರಿ 18ರಂದು ಪ್ರಾಜೆಕ್ಟ್ ಅಪ್ರೈಸಲ್ ಆರ್ಗನೈಸೇಶನ್ ಆಫ್ ಸಿಡಬ್ಲ್ಯೂಸಿನ ಮುಖ್ಯ ಎಂಜಿನಿಯರ್ ಜತೆ ನಡೆಸಿದ್ದು ಸಿಡಬ್ಲ್ಯೂಸಿ ಇದನ್ನು ಒಪ್ಪಿಕೊಂಡಿದೆ.
ತಮಿಳುನಾಡು, ಕೇರಳ ಮತ್ತು ಪುದುಚೇರಿ ಈ ಯೋಜನೆ ಸಂಬಂಧ ವರದಿ ಸಲ್ಲಿಸಲಾಗಿದ್ದು ಆ ರಾಜ್ಯಗಳಿಂಡ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಜ್ಯವು ತನ್ನ ಪತ್ರದಲ್ಲಿ ವಿವರಿಸಿದೆ.
ಈಗ, ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ (ಸಿಡಬ್ಲ್ಯೂಎಂಎ)  ಮುಂದೆ ಈ ಡಿಪಿಆರ್ ಸಲ್ಲಿಕೆಯಾಗಲಿದೆ.ಇದರ ಅನುಮೋದನೆ ದೊರೆತ ಬಳಿಕ ಕೇಂದ್ರ ಜಲಸಂಪನ್ಮೂಲ ಇಲಾಖೆ ಸಲಹಾ ಸಮಿತಿಯ  ಮುಂದೆ ಇಡಲಾಗುತ್ತದೆ. ಡಿಪಿಆರ್ ಇದೀಗ ವಿಶೇಷ ನಿರ್ದೇಶಕರು, ಪರಿಶೀಲಿಸಲಿದ್ದಾರೆ. ಅವರು ಅನುಮತಿಸಿದ್ದಾದರೆ ಬಳಿಕ ಜಲ ಸಂಪನ್ಮೂಲ ಸಚಿವಾಲಯ ನೀರಾವರಿ ಮತ್ತು ವಿವಿಧೋದ್ದೇಶ ಯೋಜನೆಗಳ ಸಲಹಾ ಸಮಿತಿಗೆ ಪರಿಶೀಲನೆಗೆ ನೀಡಲಾಗುತ್ತದೆ.ಸಲಹಾ ಸಮಿತಿಯ ಸಭೆಯಲ್ಲಿ ಸಿಡಬ್ಲ್ಯೂಸಿ ತಯಾರಿಸಿದ ಟಿಪ್ಪಣಿ ಆಧಾರದ ಮೇಲೆ ಯೋಜನೆ ಅಂಗೀಕಾರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇತ್ತೀಚೆಗೆ,ಸುಪ್ರೀಂ ಕೋರ್ಟ್ ನಲ್ಲಿ ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ  ಜಲ ಸಂಪನ್ಮೂಲಗಳ ಸಚಿವಾಲಯದ ಕಾರ್ಯದರ್ಶಿ ಆನಂದ್ ಚಂದ್ರ ಹೇಳಿದಂತೆ “ಡಿಪಿಆರ್ ಸಿದ್ದಪಡಿಸುವ ಮುನ್ನ ಕರ್ನಾಟಕವು ಕಾವೇರಿ ಜಲಾನಯನ ಪ್ರದೇಶದ ಇತರೆ ರಾಜ್ಯದೊಡನೆ ಸ್ನೇಹಪರ ಸಮಾಲೋಚನೆ ನಡೆಸಿ ಅನುಮತಿ ಪಡೆಯುವುದು ಅಪೇಕ್ಷಣೀಯ”
ಇನ್ನೊಂದೆಡೆ ತಮಿಳುನಾಡು ಮೇಕೆದಾಟು ಯೋಜನೆಯನ್ನು ತೀವ್ರವಾಗಿ ವಿರೋಧಿಸಿದೆ. ಡಿಪಿಆರ್ ರಚನೆಗೆ ಕರ್ನಾಟಕಕ್ಕೆ ಅನುಮತಿ ನೀಡುವ ಸಿಡಬ್ಲ್ಯೂಸಿ ನಿರ್ಧಾರ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಎಂದು ಅದು ಆರೋಪಿಸಿದೆ.”ತಮಿಳುನಾಡಿನ ನಿವಾಸಿಗಳ ಹಕ್ಕುಗಳನ್ನು ಈ ಯೋಜನೆ ಹಾಳುಗೆಡವಲಿದೆ.ಜೊತೆಗೆ, ನ್ಯಾಯಾಲಯವು  ನೀಡಿದ್ದ ನಿರ್ಣಯದ ವಿರುದ್ಧವಾಗಿದೆ.ಕರ್ನಾಟಕ ಮೇಕೆದಾಟು ಯೋಜನೆ ಮೂಲಕ ಕಾವೇರಿ ನೀರನ್ನು ಹೆಚ್ಚಿನ ಸಂಗ್ರಹಣೆ ಮಾಡಲು ಹೊರಟಿದೆ ” ತಮಿಳುನಾಡು ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಿದೆ.

About the author

ಕನ್ನಡ ಟುಡೆ

Leave a Comment