ರಾಜ್ಯ ಸುದ್ದಿ

ಮೇಕೆದಾಟು ವಿಚಾರ ಸಂಬಂಧ ತಮಿಳುನಾಡು ರಾಜ್ಯದೊಂದಿಗೆ ಮಾತನಾಡಲು ಸಿದ್ಧ: ಸಿಎಂ

ಹಾಸನ: ವಿವಾದಿತ ಮೇಕೆದಾಟು ಯೋಜನೆ ಸಂಬಂಧ ನೆರೆರಾಜ್ಯ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಾನವೀಯತೆ ಆಧಾರದ ಮೇಲೆ ಎರಡು ರಾಜ್ಯಗಳ ಜನರ ಹಿತಾಸಕ್ತಿಗೆ ಆದ್ಯತೆಯನ್ನು ನೀಡಿ ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ರಾಜ್ಯದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆಂದು ಹೇಳಿದ್ದಾರೆ.
ಕೇಂದ್ರ ನೀರಾವರಿ ಸಂಪನ್ಮೂಲ ಸಚಿವರು ನೀಡಿರುವ ನಿರ್ದೇಶನಗಳಂತೆ ಮೇಕೆದಾಟು ಯೋಜನೆ ಸಂಬಂಧ ಸರ್ಕಾರ ಡಿಪಿಆರ್ ಸಿದ್ಧಪಡಿಸುತ್ತಿದೆ ಎಂದದು ತಿಳಿಸಿದ್ದಾರೆ. ಕೇಂದ್ರ ಸಚಿವಾಲಯದ ನಿರ್ಧಾರಗಳಿಗೆ ಅನುಸಾರ ಕೇಂದ್ರವು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿದ್ದು, ಯೋಜನೆಯ ವೆಚ್ಚ ಭರಿಸುವಂತೆ ತಿಳಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ಇತರೆ ವಿರೋಧ ಪಕ್ಷಗಳು ಈ ವಿಚಾರವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment