ಅಂಕಣಗಳು

ಮೇಕ್ ಇನ್ ಇಂಡಿಯಾ ಬಗ್ಗೆ ಒಂದು ಅವಲೋಕನ

ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ, ವಿದೇಶಗಳಿಗಳಿಗೆ ಸುತ್ತಲು ವೆಚ್ಚವಾಗಿರುವ ಹಣದ ಮಾಹಿತಿ ಹಿಡಿದು ಟೀಕಿಸುತ್ತಿರುವ ಎಡಪಂಥಿಗಳು, ಹಾಗೂ ಮೋದಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಯಿತು, ಎಷ್ಟು ಉದ್ಯೋಗಗಳ ಸೃಷ್ಟಿಸಿದ್ದಾರೆ ಅಂತ ಪೆಕರು ಪೆಕರಾಗಿ ಪ್ರಶ್ನೆ ಕೇಳುವ ಮೂರ್ಖರು, ಭಾರತವನ್ನು ಕಾಡುತ್ತಿರುವ ನೈಜ ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ, ಮೋದಿ ಹಾಗೆ ವಿದೇಶಗಳ ಸುತ್ತುವ ನಿಜವಾದ ಅವಶ್ಯಕತೆ ಏನಿತ್ತು ಎಂಬುದು ತಿಳಿಯುತ್ತದೆ.

ಈಗಿನ ಭಾರತದ ಜನಸಂಖ್ಯೆಯಲ್ಲಿ, ಕೆಳ ಮಧ್ಯಮ ವರ್ಗದವರು ಮತ್ತು ಬಡವರ ಸಂಖ್ಯೆ 50% ಗೂ ಹೆಚ್ಚು ಇರಬಹುದು ಎಂಬುದು ನನ್ನ ಒಂದು ಅಂದಾಜು. ನನಗೆ ಈ ಊಹೆ ಬರಲು ಕಾರಣವಿದೆ.

 

ನಮ್ಮ ಹಳ್ಳಿಗಳ ಹಂತದಿಂದಲೇ ಆರಂಭಿಸೋಣ.

ಎರಡು ತಲೆಮಾರುಗಳ ಹಿಂದೆ, 10 ರಿಂದ ಹದಿನೈದು ಎಕರೆ ಭೂಮಿ ಹೊಂದಿರುವವರನ್ನು ಜಮೀನ್ದಾರರು ಅಥವ ಶ್ರೀಮಂತರು ಎಂಬಂತೆ ನೋಡಲಾಗುತ್ತಿತ್ತು.

ಅವನಿಗೆ 2-3 ಜನ ಮಕ್ಕಳು ಅಂತಿಟ್ಟುಕೊಂಡರೆ, ಅವರಿಗೆ ಆಸ್ತಿಯಲ್ಲಿ ಸಮಪಾಲು ಎಂದುಕೊಂಡರೆ, ಇರುವ ಭೂಮಿಯಲ್ಲಿ ಅವರೆಲ್ಲರಿಗೆ ಪಾಲು.

ಒಂದೊಂದು ಕುಟುಂಬಕ್ಕೆ 7 ಅಥವ 8 ಎಕರೆ. ಮತ್ತೆ ಅವರ ಕುಟುಂಭ,ಮಕ್ಕಳು ಅಂತ ನಂತರ ಆ ಆಸ್ತಿ ಕೂಡ ಪಾಲಾಗುತ್ತದೆ..

ಹಾಗಾಗಿ ಈಗ ನಮ್ಮ ಪೀಳಿಗೆಯಲ್ಲಿ, 4-5 ಎಕರೆ ಭೂಮಿ ಹೊಂದಿರುವ ರೈತರೆ ಮಧ್ಯಮ ವರ್ಗ. ಅದಕ್ಕಿಂತಲೂ ಕೆಳಗಿರುವವರು ಕೆಳ ಮಧ್ಯಮ ವರ್ಗ.

 

ಇನ್ನು ಹಿಂದೆಲ್ಲ ಸರಕಾರಿ ನೌಕರಿ ಪಡೆದವರಿಗೂ ಈ ತರ್ಕ ಅನ್ವಯಿಸಬಹುದು. ಒಬ್ಬ ಶಿಕ್ಷಕನ ಮಗ ಶಿಕ್ಷಕ ವೃತ್ತಿ ಪಡೆಯಲಾಗದೇ ಇರುವಷ್ಟು ತೀವ್ರ ಸ್ಪರ್ಧೆ ಇದೆ ಈಗ. ಆಗ ಅಂತವರು ಖಾಸಗಿ ಕಂಪನಿಗಳ ಕೆಲಸ ಅಥವ ವ್ಯಾಪಾರ ಅಂತ ಜೀವನೋಪಾಯ ಮಾರ್ಗ ಆಯ್ದುಕೊಳ್ಳಬಹುದು. ಮತ್ತು ಈಗಿನ ಪೀಳಿಗೆಯಲ್ಲಿ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಬಹುತೇಕ ಮಕ್ಕಳು,
ತಮ್ಮ ಭವಿಷ್ಯದ ಉದ್ಯೋಕಾಂಕ್ಷೆಯಿಂದ, ಶಿಕ್ಷಣದಲ್ಲಿ ಆಯ್ದುಕೊಳ್ಳುತ್ತಿರುವ ಕೋರ್ಸುಗಳೆಂದರೆ, ಪಾಲಿಟೆಕ್ನಿಕ್, ಡಿಪ್ಲೋಮಾ, ಮತ್ತು ಎಂಜಿನಿಯರಿಂಗ್.

 

ಇನ್ನು ಬಡವರ ಮಕ್ಕಳು, ಹೆಚ್ಚು ಓದುವ ಸೌಲಭ್ಯವಿಲ್ಲದೆ ಅಥವ ಕೆಲವೊಮ್ಮೆ ಪ್ರತಿಭೆ, ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಮತ್ತು ಬಡತನದ ಕಾರಣದಿಂದಾಗಿ, ಬೇಗ ಕೆಲಸ ಹುಡುಕಿ ದುಡಿಯಬೇಕೆಂಬ ಕುಟುಂಭದ ಒತ್ತಡದಿಂದಾಗಿ, ಜಾಬ್ ಓರಿಯೆಂಟೆಡ್ ಕೋರ್ಸುಗಳು, ಅಥವ ಐ. ಟಿ. ಐ, ಇಂಥವುಗಳನ್ನು ಆಯ್ದುಕೊಳ್ಳುತ್ತಾರೆ.

 

ವೃತ್ತಿ ಶಿಕ್ಷಣ, ಕೌಶಲ್ಯ ತರಬೇತಿಗಳು, ಹಲವಾರು ಇವೆಯಾದರೂ, ಹೆಚ್ಚು ಜನರ ಆಯ್ಕೆಗಳನ್ನೇ ನಾನಿಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳುತ್ತಿದ್ದೇನೆ.

ಸರಿ, ಈಗ ನಮ್ಮ ಸಮಾಜದಲ್ಲಿ, ಡಿಪ್ಲೋಮಾ, ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಐ.ಟಿ.ಐ ಕೋರ್ಸುಗಳನ್ನು ಓದುತ್ತಿರುವ ಮಕ್ಕಳಲ್ಲಿ, 50% ಗಿಂತ ಹೆಚ್ಚು, ಕೆಳಮಧ್ಯಮ ವರ್ಗ ಮತ್ತು ಬಡವರೆ ಇದ್ದಾರೆ ಎಂಬ ವಿಚಾರವಂತು ಸ್ಪಷ್ಟವಾಯಿತು. ಬಹುತೇಕ ಇಂಥವರೆಲ್ಲರ ವಿಧ್ಯಾಭ್ಯಾಸ, ಸಾಲದಿಂದಲೆ ನಡೆದಿರುತ್ತದೆ. ಆ ಸಾಲ ತೀರಿಸುವ ಹೊಣೆ ಮತ್ತು ಆ ಕುಟುಂಭಗಳ ಹೊಣೆ ಆ ಮಕ್ಕಳ ಮೇಲೆ ಇರುತ್ತದೆ. ಇನ್ನು ಇಂಜಿನಿಯರಿಂಗ್ ಓದಲಿಕ್ಕಂತೂ ಲಕ್ಷಗಟ್ಟಲೆ ಸಾಲ ಮಾಡಬೇಕಾಗಬಹುದು..

 

ಒಂದು ವೇಳೆ ಇಂತ ಮಕ್ಕಳಿಗೆ ಕೆಲಸವೇ ಸಿಗಲಿಲ್ಲ ಅಂತಿಟ್ಟುಕೊಳ್ಳಿ, ಆಗ ಆ ಕುಟುಂಬಗಳ ಗತಿ ಮತ್ತು ಆರ್ಥಿಕ ಪರಿಸ್ಥಿತಿ ಊಹಿಸಿಕೊಳ್ಳಿ…!!!!

 

ಹೌದು, ಈವತ್ತಿನ ಭಾರತದ ನಿಜವಾದ ಸಮಸ್ಯೆ- “ನಿರುದ್ಯೋಗ”!!!!!.

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ಮಾಹಿತಿ ಪ್ರಕಾರ, ಭಾರತದಲ್ಲಿ 6214 ಇಂಜಿನಿಯರಿಂಗ್ ಕಾಲೇಜುಗಳಿವೆ. ಮತ್ತು ಪ್ರತಿ ವರ್ಷ 29 ಲಕ್ಷ ಇಂಜಿನಿಯರಿಂಗ್ ಪದವೀಧರರು ಉತ್ಪಾದನೆಯಾಗುತ್ತಿದ್ದಾರೆ ಮತ್ತು ಅವರಲ್ಲಿ ಉದ್ಯೋಗ ಸಿಗುತ್ತಿರುವುದು ಬರೀ 15 ಲಕ್ಷ ಮಂದಿಗೆ ಮಾತ್ರ !!!!!!

ಆತಂಕವಾಗುತ್ತಿದೆಯಲ್ಲವೇ..?.

 

ಇನ್ನು ನಮ್ಮ ಕರ್ನಾಟಕದ ವಿಷಯಕ್ಕೆ ಬರೋಣ..

ಮೊದಲಿಗೆ “ಕಾಲೇಜುಗಳು”ಎಂಬ, ಪದವೀಧರರನ್ನು ಉತ್ಪಾದಿಸುತ್ತಿರುವ ಫ್ಯಾಕ್ಟರಿಗಳ ಅಂಕಿ ಅಂಶ ನೋಡೋಣ….

ಕರ್ನಾಟಕದಲ್ಲಿ ಒಟ್ಟು 205 ಇಂಜಿನಿಯರಿಂಗ್ ಕಾಲೇಜುಗಳಿವೆ, ಪ್ರತಿ ವರ್ಷ 80 ಸಾವಿರ ಇಂಜಿನಿಯಿಂಗ್ ಪದವೀಧರರು ಉತ್ಪಾದನೆಯಾಗುತ್ತಿದ್ದಾರೆ !!

ಮತ್ತು 295 ಪಾಲಿಟೆಕ್ನಿಕ್ ಕಾಲೇಜುಗಳಿವೆ ಮತ್ತು ಪ್ರತೀ ವರ್ಷ 86000 ವಿಧ್ಯಾರ್ಥಿಗಳು ಕೋರ್ಸು ಮುಗಿಸಿ ಹೊರಬರುತ್ತಿದ್ದಾರೆ !!!.

ಮತ್ತು 1400 ಐ.ಟಿ.ಐ ಕಾಲೇಜುಗಳಿವೆ ಮತ್ತು ಪ್ರತಿ ಒಂದೂವರೆ ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪ್ರತಿ ವರ್ಷ ಕೋರ್ಸು ಮುಗಿಸಿ ಹೊರಬರುತ್ತಿದ್ದಾರೆ….!!!!

ಒಟ್ಟಾರೆ ಇವರೆಲ್ಕ ಸೇರಿ, ಮೂರುವರೆ ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳು, ಪ್ರತಿ ವರ್ಷ ಉದ್ಯೋಗ ಹುಡುಕಲು ಸಿದ್ಧವಾಗುತ್ತಾರೆ ಅಂತಿಟ್ಟುಕೊಳ್ಳೋಣ…

ಸರಿ ಈಗ ಇವರಿಗೆಲ್ಲ ಕೆಲಸ ಸಿಗುತ್ತಿದೆಯಾ? ಸೃಷ್ಟಿಯಾಗುತ್ತಿರುವ ಉದ್ಯೋಗಗಳ ಸಂಖ್ಯೆ ಎಷ್ಟು ಹಾಗಾದರೆ.?

 

ಕರ್ನಾಟಕದಲ್ಲಿ, ಒಟ್ಟು 4.81 ಲಕ್ಷ MSMI ಕಂಪನಿಗಳಿವೆ.( ಅಂದರೆ ಸಣ್ಣ ಹಾಗೂ ಅತಿ ಸಣ್ಣ ಕಂಪನಿಗಳಿವೆ) ಮತ್ತು ಸುಮಾರು 700 MNC ಕಂಪನಿಗಳಿವೆ.
ಇವುಗಳಲ್ಲಿ ಈ ಮೇಲೆ ಹೇಳಿರುವ ಕೋರ್ಸುಗಳನ್ನು ಮುಗಿಸಿರುವ ವಿಧ್ಯಾರ್ಥಿಗಳಿಗೆ ಕೆಲಸ ಕೊಡಬಲ್ಲ ಕಂಪನಿಗಳೆಂದರೆ, ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಗಳು. ಇಂಥವುಗಳ ಸಂಖ್ಯೆ ಎಷ್ಟಿದೆ ಹಾಗಾದರೆ ??

ಕರ್ನಾಟಕದಲ್ಲಿರುವ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಸಂಖ್ಯೆ – 1054. ಮತ್ತು ಹಲವು ನೂರು ಮೈಕ್ರೋ ಯೂನಿಟ್ ಗಳು(25 ಲಕ್ಷಕ್ಕಿಂತಲೂ ಕಡಿಮೆ ಬಂಡವಾಳದ ಕಂಪನಿಗಳು) ಇರಬಹುದು.

ಮಧ್ಯಮ ಗಾತ್ರದ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ಗಳಲ್ಲಿ 200 ರಿಂದ 600 ಜನ ಕೆಲಸ ಮಾಡಬಹುದಾದ್ದರಿಂದ ( ನನ್ನ ಕೈಗಾರಿಕಾ ಅನುಭವದಲ್ಲಿ ಗಮನಿಸಿರುವುದು), ಸರಾಸರಿ 350 ಜನ ಒಂದೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಊಹಿಸೋಣ. ಅಲ್ಲಿಗೆ ಒಟ್ಟು 1054 ಕಂಪನಿಗಳ ಉದ್ಯೋಗಿಗಳ ಸಂಖ್ಯೆ 368900 ಆಗಬಹುದು. ಮತ್ತು MNC ಘಟಕಗಳಲ್ಲಿನ ಉದ್ಯೋಗಿಗಳ ಸಂಖ್ಯೆಯೂ ಸೇರಿ, ಒಟ್ಟಾರೆ 6 ಲಕ್ಷ ಮಂದಿ ಕೆಲಸ ಪಡೆದಿದ್ದಾರೆ ಅಂತಿಟ್ಟುಕೊಳ್ಳೋಣ. ಇವರೆಲ್ಲ ಅದಾಗಲೇ ಕೆಲಸ ಪಡೆದವರಾಗಿರುತ್ತಾರೆ. ಹಾಗಾದರೆ ಇಷ್ಟೂ ಕಂಪನಿಗಳಲ್ಲಿ, ಪ್ರತೀ ವರ್ಷ ಸೃಷ್ಟಿಯಾಗಬಹುದಾದ ಉದ್ಯೋಗಗಳೆಷ್ಟು ?

ಯಾವುದೇ ಒಂದು ಕಂಪನಿಯಲ್ಲಿ, ಯಾವುದಾದರೂ ಹೊಸ ಪ್ರಾಜೆಕ್ಟ್, ಅಥವಾ ಪ್ಲಾಂಟ್ ವಿಸ್ತರಣೆ ಇಲ್ಲವಾದರೆ, ಬರೀ ಕಂಪನಿಯೊಳಗೆ ಖಾಲಿಯಾಗುವ ಹುದ್ದೆಗಳ ಭರ್ತಿ ಅಥವ ಇನ್ನಿತರೇ ಕಾರಣಗಳಿಂದ ಸೃಷ್ಠಿಯಾಗಬಹುದಾದ ಉದ್ಯೋಗಗಳ ಸಂಖ್ಯೆ, ಅಷ್ಟೂ ಉದ್ಯೋಗಿಗಳ ಸಂಖ್ಯೆಯಲ್ಲಿ ಗರಿಷ್ಠ 15%.ಅದೂ ಸಹ ಕಂಪನಿ ಪ್ರಗತಿಯಲ್ಲಿದ್ದು ಒಳ್ಳೆ ಲಾಭದಲ್ಲಿ ನಡೆಯುತ್ತಿದ್ದರೆ, ಮತ್ತು ಹಣದುಬ್ಬರ ಮತ್ತು ಇನ್ನಿತರ ಏಳು ಬೀಳು ನಿಯಂತ್ರಣದಲ್ಲಿದ್ದರೆ ಮಾತ್ರ.

ಅಂದರೆ ಅಷ್ಟೂ ಕಂಪನಿಗಳಲ್ಲಿ, ಪ್ರತೀ ವರ್ಷ ಸೃಷ್ಠಿಯಾಗುತ್ತಿರುವ ಹೊಸ ಉದ್ಯೋಗಗಳು, ಗರಿಷ್ಠ
90000 ಅಷ್ಟೆ !!!!!

ಜುಲೈ 13, 2016 ರ, ಇಂಡಿಯಾ ಟುಡೆ ಪತ್ರಿಕೆಯ ವರದಿ ಪ್ರಕಾರ,
ಭಾರತದಲ್ಲಿ ಪ್ರತಿ ವರ್ಷ ಹೊರಬರುತ್ತಿರುವ, ಇಂಜಿನಿಯರಿಂಗ್ ಪದವೀಧರರಲ್ಲಿ, 40% ಮಂದಿ ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಮತ್ತು 60% ಜನ ನಿರುದ್ಯೋಗಿಗಳಾಗುತ್ತಿದ್ದಾರೆ.

ಆ 40% ಜನರಲ್ಲಿ ಕೇವಲ 7% ಜನ ಮಾತ್ರ, ಉದ್ಯೋಗ ಪಡೆಯುವ ಕೌಶಲ್ಯ ಹೊಂದಿದ್ದು, ತಮಗಿಷ್ಟವಾದ ತಮ್ಮ ಆಸಕ್ತಿಗೆ ಅನುಗುಣವಾದ ಕೆಲಸ ಪಡೆಯುತ್ತಿದ್ದಾರೆ. ಉಳಿದವರು ಕೆಲಸಕ್ಕೆ ಬೇಕಾದ ಕೌಶಲ್ಯವಿಲ್ಲದ್ದರಿಂದ, ಅನಿವಾರ್ಯವಾಗಿ, ತಮ್ಮ ಆಸಕ್ತಿಗೆ ಅನುಗುಣವಲ್ಲದ ಉದ್ಯೋಗ ಪಡೆಯುತ್ತಿದ್ದಾರೆ…

ಗೆಳೆಯರೆ, ಪರಿಸ್ಥಿತಿ ಹೀಗೇ ಇದ್ದರೆ, ಇನ್ನು ಹತ್ತು ವರ್ಷಗಳ ನಂತರ ಭಾರತದಲ್ಲಿ ಉತ್ಪಾದನೆಯಾಗಲಿರುವ ನಿರುದ್ಯೋಗಿಗಳ ಸಂಖ್ಯೆ ಊಹಿಸಿಕೊಳ್ಳಿ….ನಿರುದ್ಯೋಗ ಸಮಸ್ಯೆ ಅದೆಷ್ಟು ಭೀಕರವಾಗಿ ನಮ್ಮೆದುರು ಬಂದು ನಿಲ್ಲಬಹುದೆಂಬ ಕಲ್ಪನೆ ಬರುತ್ತದೆ. ಮತ್ತು ಆಗ ಭಾರತ ನಿಜವಾಗಿಯೂ ದಿವಾಳಿಯಾದಂತೆ !!!!!????

ಇದಕ್ಕಾಗಿಯೇ, ಮಹಾನ್ ಚಿಂತಕ,ಇಂಜಿನಿಯರ್, ಸರ್. ಎಮ್. ವಿಶ್ವೇಶ್ವರಯ್ಯನವರು ಈ ಮಾತು ಹೇಳಿದ್ದಾರೆ…

” ಕೈಗಾರೀಕರಣ ಇಲ್ಲವೆ ವಿನಾಶ” !!!

ಭವಿಷ್ಯದ ಈ ವಿಪತ್ತು ತಪ್ಪಿಸಲು, ಕೈಗಾರೀಕರಣ, ಮತ್ತು ಪ್ರಸ್ತುತ ಕೈಗಾರಿಕೆಗಳ ಸಾಮರ್ಥ್ಯ ವಿಸ್ತರಣೆ, ಯೂನಿಟ್ ಗಳ ವಿಸ್ತರಣೆ, ಮತ್ತು ಬಂಡವಾಳ ಹೂಡಿಕೆ ನಡೆಯಲೇ ಬೇಕಿದೆ. ಇದು ಭಾರತದ ಭವಿಷ್ಯಕ್ಕೆ ಅತ್ಯಂತ ಅಗತ್ಯ.

ಇಂತಹ ದೂರದೃಷ್ಟಿಯಿಟ್ಟುಕೊಂಡೇ ಮೋದಿ ಕೈಗಾರಿಕೆಗಳ ಅಭಿವೃದ್ಧಿಗಾಗಿ, ಬಂಡವಾಳ ಆಕರ್ಶಿಸುವುದಕ್ಕಾಗಿ, ” ಮೇಕ್ ಇನ್ ಇಂಡಿಯಾ” ಯೋಜನೆಯಡಿಯಲ್ಲಿ, ವಿದೇಶಿ ನೀತಿಗಳ ಸಡಿಲಿಸಿ, ಬಿಡುವಿಲ್ಲದೆ ವಿದೇಶಗಳ ಸುತ್ತುತ್ತ ಶ್ರಮಿಸಿದ್ದಾರೆ.

ಈಗ ಮತ್ತೆ ನಿಮ್ಮ ಪೆಕರು ಪ್ರಶ್ನೆ ಹೊರಬರಹುದು.” ಮೇಕ್ ಇನ್ ಇಂಡಿಯಾದಿಂದ, ಇದುವರೆಗೂ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ?” ಎಂಬುದು..!!!

ಸ್ವಲ್ಪ ವೈಜ್ಞಾನಿಕವಾಗಿ ಆಲೋಚಿಸಿ……

ಈವತ್ತು ಭಾರತ ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿ ಬಂದು ನಿಂತಿರುವುದು, ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟುಮಾಡಿರುವ ಕ್ರಾಂತಿ, ಮತ್ತು ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಇದರ ಕೊಡುಗೆ ಇದೆಲ್ಲ ನಿಮಗೆ ತಿಳಿದೇ ಇದೆ. ಈ ಕ್ರಾಂತಿಯ ಹಿಂದಿನ ಇತಿಹಾಸ ಸ್ವಲ್ಪ ನೆನಪಿಸಲು ಬಯಸುವೆ.

19760 ರಲ್ಲಿ, KSEDC ಯ ಛೇರ್ ಮನ್ ಮತ್ತು MD ಆಗಿದ್ದ R.K. ಬಳಿಗಾ ಅವರು, ಮಾಹಿತಿ ತಂತ್ರಜ್ಞಾತದ ಅಭಿವೃದ್ಧಿಯ ಬಗೆಗಿನ ತಮ್ಮ ಕನಸಿನ ಕೂಸಾದ ” ಎಲೆಕ್ಟ್ರಾನಿಕ್ ಸಿಟಿ ಡೆವಲಪ್ ಮೆಂಟ್” ಪರಿಕಲ್ಪನೆಯ ಪ್ರಸ್ತಾವನೆಯನ್ನು ಆಗಿನ ಮುಖ್ಯಮಂತ್ರಿ, ದೇವರಾಜು ಅರಸ್ ಅವರಿಗೆ ಸಲ್ಲಿಸುತಾರೆ. ಮತ್ತು ಅವರ ಬೆಂಬಲದೊಂದಿಗೆ, ಬೆಂಗಳೂರು ದಕ್ಷಿಣದಲ್ಲಿ, 335 ಎಕರೆ ಭೂಮಿ ನಿಗದಿ ಪಡಿಸಿ, ಇಂಡಸ್ಟ್ರಿಯಲ್ ಪಾರ್ಕ್ ಮಾಡಿ, ಎಲೆಕ್ಟ್ರಾನಿಕ್ ಸಿಟಿ ಅಭಿವೃದ್ಧಿಗೆ ನಾಂದಿ ಹಾಡುತ್ತಾರೆ. ಮೊದಲಿಗೆ HP ಕಂಪನಿಯಿಂದ ಆರಂಭಗೊಂಡು, ಇನ್ಫೋಸಿಸ್, ವಿಪ್ರೋ ಕಂಪನಿಗಳು ತಮ್ಮ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕುತ್ತಾರೆ. ಕ್ರಮೇಣ ಒಂದೊಂದೇ ಕಂಪನಿಗಳು ಬೆಂಗಳೂರಿಗೆ ಪಾದಾರ್ಪಣೆ ಮಾಡುತ್ತಾ,ಇಡೀ ಜಗತ್ತೇ ಬೆಂಗಳೂರಿನತ್ತ ತಿರುಗಿ ನೋಡುವಂತೆ ಬೆಳೆಯುತ್ತವೆ..! ಈವತ್ತು ಬೆಂಗಳೂರಿನಲ್ಲಿ 3500 ಕ್ಕೂ ಹೆಚ್ಚು ಐ. ಟಿ ಕಂಪನಿಗಳು ತಲೆಯೆತ್ತಿ ನಿಂತಿವೆ……

 

ಅಂದು ಬಳಿಗಾ ಅವರು ಕಂಡ ಕನಸು ನನಸಾಗಲು, ಅವರು ಬಿತ್ತಿದ ಅಭಿವೃದ್ಧಿಯ ಬೀಜ ಬೆಳೆದು ಮರವಾಗಿ ಫಲ ಕೊಡಲು ಸರಿ ಸುಮಾರು ಇಪ್ಪತ್ತು ವರ್ಷಗಳು ಬೇಕಾದವು. ಯಾವುದಕ್ಕೇ ಆದರೂ ಸಮಯ ಬೇಕಲ್ಲವೆ.

ಮೋದಿಯವರ ಮೇಕ್ ಇನ್ ಇಂಡಿಯಾ ಕಲ್ಪನೆಯಲ್ಲಿ ಇಂತಹ ನೂರಾರು ಕನಸುಗಳಿವೆ !!!! ಅಭಿವೃದ್ಧಿಯ ಬೀಜ ಇವೆ. ಬರೀ ಎರಡು ಮೂರು ವರ್ಷದಲ್ಲಿ ಅಭಿವೃದ್ಧಿ ತೋರಿಸಬೇಕು, ಉದ್ಯೋಗ ಸೃಷ್ಟಿ ತೋರಿಸಬೇಕು ಎನ್ನಲು, ಕೈಗಾರಿಕೆ ಎಂಬುವು ಕಿರಾಣಿ ಅಂಗಡಿಗಳಲ್ಲ.

ಆದರೂ ಮೇಕ್ ಇನ್ ಇಂಡಿಯಾ ಏನು ಸಾಧಿಸಿದೆ ಎನ್ನಲು, ಒಂದು ಚಿಕ್ಕ ಮಾಹಿತಿ ಕೊಡಲೆತ್ನಿಸುವೆ.

ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಾಧಿಸಲು ಹೊರಟಿರುವ ಕ್ರಾಂತಿಗಾಗಿ, ಅಭಿವೃದ್ಧಿಪಡಿಸಲು, 25 ಕ್ಷೇತ್ರಗಳನ್ನು ಗುರುತಿಸಲಾಗಿದೆ.

ಇವುಗಳಲ್ಲಿ ಪ್ರತಿಯೊಂದರ ಬಗೆಗೂ ಮಹಿತಿ ಕೊಡಬೇಕೆಂದರೆ ಒಂದು ಪುಸ್ತಕವನ್ನೇ ಬರೆಯಬೇಕಾದೀತು. ಹಾಗಾಗಿ ಬರೀ ಆಟೊಮೊಬೈಲ್ ಕ್ಷೇತ್ರವನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಿದ್ದೇನೆ. ಯಾಕೆಂದರೆ ಆಟೊಮೊಬೈಲ್ ಕ್ಷೇತ್ರವನ್ನು ಮೇಕ್ ಇನ್ ಇಂಡಿಯಾದ ಸೀನಿಯರ್ ಸೆಕ್ಟರ್ ಆಗಿ ಪರಿಗಣಿಸಲಾಗಿದೆ.

ಭಾರತದ ಅಭಿವೃದ್ಧಿಗೆ ಆಟೊಮೊಬೈಲ್ ಇಂಡಸ್ಟಿಯ ಜಿಡಿಪಿ 7.1%

ಮೇಕ್ ಇನ್ ಇಂಡಿಯಾ ದಿಂದಾಗಿ ಆಟೊಮೊಬೈಲ್ ಇಂಡಸ್ಟಿಗೆ 2014 ರಿಂದ 2016 ರ ವರೆಗೆ ಹರಿದು ಬಂದಿರುವ ಬಂಡವಾಳ- 5.25 ಬಿಲಿಯನ್ ಡಾಲರ್ಸ್.

ಮೇಕ್ ಇನ್ ಇಂಡಿಯಾ ಯೋಜನೆಯ ವಿದೇಶಿ ನೀತಿ ಹಾಗೂ ಕೆಲವು ಬೆನಫಿಟ್ ಗಳಿಂದ ಉತ್ತೇಜನಗೊಂಡು, ಭಾರತದಲ್ಲಿರುವ ಕೆಲವು ಬಹುರಾಷ್ಟ್ರೀಯ ಕಾರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು, ತಮ್ಮ ಅಸೆಂಬ್ಲಿ ಲೈನ್ ವಿಸ್ತರಿಸಲು ಆಸಕ್ತಿ ತೋರಿಸಿವೆ ಮತ್ತು ಅದಾಗಲೇ ಬಂಡವಾಳ ಹೂಡಿವೆ. ಅವುಗಳಲ್ಲಿ ಪ್ರಮುಖವಾದವುಗಳು,ISUZU ಮೋಟಾರ್ಸ್, ಫೋರ್ಡ್ ಮೋಟಾರ್ಸ್,ಟಾಟಾ ಮೋಟಾರ್ಸ್, ಸುಜುಕಿ ಮೋಟಾರ್ಸ್( ನಿಮಗೆ ತಿಳಿದಿರಲಿ, ಒಂದು ಕಂಪನಿಯ ಒಂದೇ ಒಂದು ಅಸೆಂಬ್ಲಿ ಲೈನ್ ವಿಸ್ತರಣೆಗೊಂಡರೆ, ನೂರಾರು ಅಥವ ಕೆಲವೊಮ್ಮೆ ಸಾವಿರಾರು ಹೊಸ ಉದ್ಯೋಗ ಸೃಷ್ಟಿಯಾಗುತ್ತವೆ, ಹತ್ತಾರು ಹೊಸ ಸರಬರಾಜು ಕಂಪನಿಗಳು ಹುಟ್ಟಿಕೊಳ್ಳುತ್ತವೆ, ಮತ್ತು ಅವುಗಳಲ್ಲೂ ಉದ್ಯೋಗವಕಾಶ ತೆರೆದುಕೊಳ್ಳುತ್ತವೆ.ಮತ್ತು ಸಪ್ಲೈಯರ್ ಚೈನ್ ನಲ್ಲಿರುವ ಎಲ್ಲ ಕಂಪನಿಗಳ ಪ್ರದೇಶಗಳಲ್ಲಿ ಸ್ವಲ್ಪ ವ್ಯಾಪಾರ ವಹಿವಾಟು ಹೆಚ್ಚುತ್ತವೆ. ಸುತ್ತಮುತ್ತಲ ಜನವಸತಿ ಸ್ಥಳೀಯವಾಗಿ ಆರ್ಥಿಕ ಅಭಿವೃದ್ಧಿಯಾಗುತ್ತದೆ)

ಮೇಕ್ ಇನ್ ಇಂಡಿಯಾ ಯೋಜನೆಯಡಿ, ಗುಜರಾತ್ ನಲ್ಲಿ ಸೆಕೆಂಡ್ ಅಸೆಂಬ್ಲಿ ಲೈನ್ ವಿಸ್ತರಣೆಗೊಳ್ಳುತ್ತಿದೆ.

ಮೇಕ್ ಇನ್ ಇಂಡಿಯಾದಿಂದಾಗಿ ISUZU ಆಂದ್ರ ಪ್ರದೇಶದಲ್ಲಿ, 445 ಡಾಲರ್ ಗಳಷ್ಟು ಬಂಡವಾಳ ಹೂಡಿದೆ.

ಟಾಟಾ ಮೋಟಾರ್ಸ್ SUV ಕಾರ್ ಗಳ ಉತ್ಪಾದಿಸಲು, 280 ಕೋಟಿ ಡಾಲರ್ಸ್ ಬಂಡವಾಳ ಹೂಡಲು ಪ್ರಕ್ರಿಯೆ ಆರಂಭಿಸಿದೆ.

ಫೀಯೆಟ್ ಕಂಪನಿ ರೋಬೋಟೈಸ್ಡ್ ಗೇರ್ ಬಾಕ್ಸ್ ಗಳ ಉತ್ಪಾದನೆಗಾಗಿ ಬಂಡವಾಳ ಹೂಡಿದೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಪುಣೆ ಮೂಲದ ಫೋರ್ಸ್ ಮೋಟಾರ್ಸ್ 100 ಕೋಟಿ ರೂ ಬಂಡವಾಳದೊಂದಿಗೆ ಜೂನ್ 2016 ರಲ್ಲಿ ಫ್ಯಾಕ್ಟರಿ ಉದ್ಘಾಟಿಸಿದೆ.

ಮೇಕ್ ಇನ್ ಇಂಡಿಯಾದಿಂದ ಉತ್ತೇಜನಗೊಂಡ SUZUKI ಕಂಪನಿಯು, ಗುಜರಾತ್ ನಲ್ಲಿ ಫ್ಯಾಕ್ಟರಿ ಆರಂಭಿಸಿದೆ.

ಮರ್ಸಿಡಿಸ್ ಬೆಂಜ್ ತನ್ನ ಎರಡನೆ ಉತ್ಪಾದನಾ ಘಟಕವನ್ನು ಜುಲೈ 2015 ರಲ್ಲಿ ಆರಂಭಿಸಿದೆ.

ಒಟ್ಟಾರೆ ಈ ಎರಡು ವರ್ಷಗಳಲ್ಲಿ, ಆಟೋಮೊಬೈಲ್ ಉತ್ಪಾದನೆಯಲ್ಲಿ 2.6% ನಷ್ಟು ಹೆಚ್ಚಳವಾಗಿದೆ.

ಮಾರಾಟ 7.24% ನಷ್ಟು ಏರಿಕೆಯಾಗಿದೆ.

ದ್ವಿಚಕ್ರ ವಾಹನಗಳ ರಪ್ತು ಪ್ರಮಾಣ 11.1% ನಷ್ಟು ಏರಿಕೆಯಾಗಿದೆ.

ಮೇಕ್ ಇನ್ ಇಂಡಿಯಾದಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹರಿದು ಬಂದಿರುವ ಬಂಡವಾಳ ಪ್ರಮಾಣದಲ್ಲಿ ಅತ್ಯಂತ ಹೆಚ್ಚು ಎಂದರೆ, ಫೋರ್ಡ್ ಕಂಪನಿಯದು.(979.50 ಕೋಟಿ ಡಾಲರ್ಸ).

ಇವುಗಳ ನಂತರ ಕ್ರಮವಾಗಿ, ಸುಜುಕಿ ಮೋಟಾರ್ಸ್, ಡೈಮ್ಲರ್ ಎ. ಜಿ. ನಿಸಾನ್ ಮೋಟಾರ್ಸ್, ಇಸುಜೋ ಮೋಟಾರ್ಸ್, ಕಾಂಟಿನೆಂಟಲ್ ಆಟೋಮೋಟಿವ್ ಲಿಮಿಟೆಡ್, ರೆನಾಲ್ಟ್ ಗ್ರೂಪ್, ಕಾರ್ಗೋ ಇಂಡಿಯಾ, ಬ್ಲೂ ಎಲಿಪೆಂಟ್, ಸಿಂಗಪೂರ್ ಏರ್ ಲೈನ್ಸ್, ಮ್ಯಾನ್ ಟ್ರಕ್, NHK ಸ್ಪ್ರಿಂಗ್ಸ್, ಟೋಯೋದ ಐರನ್ ವರ್ಕ್ಸ್, ಮತ್ತೂ ವೋಲ್ವೋ ಹಾಗೂ ಇನ್ನೂ ಹಲವಾರು ಕಂಪನಿಗಳಿಂದ ಅಪಾರ ಪ್ರಮಾಣದ ಬಂಡವಾಳ ಹರಿದು ಬಂದಿದೆ.

ಗೆಳೆಯರೆ, ಇಷ್ಟೆಲ್ಲಾ ಬರಿ ಆಟೋಮೊಬೈಲ್ ಕ್ಷೇತ್ರದ ಮಾಹಿತಿಗಳು.
ಇದೇ ರೀತಿ ಎಲೆಕ್ಟ್ರಾನಿಕ್ಸ್, ಬಯೋಟೆಕ್ನಾಲಜಿ, ಏರೋಸ್ಪೇಸ್, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಹಲವಾರು ಕಂಪನಿಗಳು ಮೇಕ್ ಇನ್ ಇಂಡಿಯಾ ಗೆ ಕೈ ಜೋಡಿಸಿವೆ.

ಒಟ್ಟಿನಲ್ಲಿ, ಭವಿಷ್ಯದಲ್ಲಿ ಭಾರತ ನೋಡಬಹುದಾದ ಒಂದು ದೊಡ್ಡ ಕೈಗಾರಿಕಾ ಕ್ರಾಂತಿಗೆ ಮೋದಿ ನಾಂದಿ ಹಾಡಿದ್ದಾರೆ !!!

ಆದರೆ ಇದು ಸಾರ್ಥಕವಾಗಬೇಕಾದರೆ, ಮುಂದೆ ಬರುವ ಪ್ರಧಾನಿಗಳು ಇನ್ನೂ ಒಂದು ದಶಕದವರವಗೂ ಇದರ ಬಗ್ಗೆ ಮುತುವರ್ಜಿಯಿಂದ, ನಿಜವಾದ ಅಭಿವೃದ್ಧಿಯ ಕಾಳಜಿಯೊಂದಿಗೆ, ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸಿ ಬೆಂಬಲ ನೀಡಬೇಕು.

ಉದಾಹರಣೆಗೆ, ದೇವರಾಜ್ ಅರಸರ ಕಾಲದಲ್ಲಿ ಆರಂಭವಾದ ಮಾಹಿತಿ ತಂತ್ರಜ್ಞಾತದ ಯೋಜನೆಗೆ ನಂತರ ಬಂದ ದೇವೇಗೌಡ ಎಸ್ ಎಂ ಕೃಷ್ಣ ಮುಂತಾದವರೆಲ್ಲ ಪ್ರೊತ್ಸಾಹಿಸಿ ಕೆಲಸ ಮಾಡಿದ್ದರಿಂದ, ಮಾಹಿತಿ ತಂತ್ರಜ್ಞಾನದಲ್ಲಿ ಭಾರತದ ಈ ಮಟ್ಟಿಗಿನ ಸಾಧ್ಯವಾಗಿದೆ.

ಮೇಕ್ ಇನ್ ಇಂಡಿಯ ಬದಲಾವಣೆ ತರಲಿ.

” ಕೈಗಾರೀಕರಣ ಇಲ್ಲವೇ ವಿನಾಶ”

ಪ್ರಶಾಂತ್ ಕೋಲ್ಕುಂಟೆ.

About the author

ಕನ್ನಡ ಟುಡೆ

2 Comments

Leave a Comment