ರಾಷ್ಟ್ರ

ಮೇಲುಕೋಟೆಗೆ ಅಮಿತ್‌ ಶಾ ಭೇಟಿ ದೇವರ ದರ್ಶನವಿಲ್ಲದೆ ನಿರಾಶೆಯಲ್ಲಿ ಭಕ್ತರು

ಮಂಡ್ಯ: ಮೇಲುಕೋಟೆಗೆ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.
ಚಲುವನಾರಾಯಣಸ್ವಾಮಿಗೆ ವೈರಮುಡಿ ಉತ್ಸವ ಆದ ಐದನೇ ದಿನಕ್ಕೆ ನಡೆಯುವ ತೀರ್ಥ ಸ್ನಾನದ ಹಿನ್ನೆಲೆಯಲ್ಲಿ ಮೇಲುಕೋಟೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆಗಮಿಸಿದ ಭಕ್ತರು ದೇವರ ದರ್ಶನವಿಲ್ಲದೆ ನಿರಾಸೆಯಿಂದವಾಪಸಾಗುತ್ತಿದ್ದಾರೆ. ಶಾ ಭೇಟಿ ಹಿನ್ನಲೆಯಲ್ಲಿ ಮೇಲುಕೋಟೆ ದೇವಾಲಯಕ್ಕೆ ವಿಶೇಷ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

About the author

ಕನ್ನಡ ಟುಡೆ

Leave a Comment