ರಾಜ್ಯ ಸುದ್ದಿ

ಮೇಲ್ವರ್ಗದ ಬಡವರಿಗೆ ಮೀಸಲು ಐತಿಹಾಸಿಕ ನಿರ್ಧಾರ: ಎಚ್​.ಡಿ.ದೇವೇಗೌಡ

ಬೆಂಗಳೂರು: ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ವರ್ಗದವರಿಗೂ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ.10 ಮೀಸಲಾತಿ ಕಲ್ಪಿಸುವ ನೀತಿಗೆ ಕೇಂದ್ರ ಸಚಿವ ಸಂಪುಟ ನೀಡಿರುವ ಅನುಮೋದನೆಯನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬೆಂಬಲ ಸೂಚಿಸಿದ್ದಾರೆ. ಮೇಲ್ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರ ಜೀವನ ಮಟ್ಟ ಸುಧಾರಣೆ ವಿಚಾರದಲ್ಲಿ ಅವರ ಪರ ಸದಾ ನಾನು ನಿಲ್ಲುತ್ತೇವೆ ಎಂದು ದೇವೇಗೌಡರು ಟ್ವಿಟ್ ಮಾಡಿದ್ದಾರೆ.

ಐತಿಹಾಸಿಕ ನಿರ್ಧಾರ: ಜಾತಿ ಜಾತಿಗಳನ್ನು ಎತ್ತಿಕಟ್ಟಿ ಮೀಸಲಾತಿ ಹೋರಾಟ ಮಾಡುತ್ತಿದ್ದವರಿಗೆ ಈಗ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಟ್ಟಿದ್ದಾರೆ. ಯಾರದೇ ಮೀಸಲಾತಿಯನ್ನು ಕಸಿದುಕೊಳ್ಳದೆ ಎಲ್ಲ ವರ್ಗದ ಬಡವರಿಗೆ ಮೀಸಲು ಕಲ್ಪಿಸುವ ಐತಿಹಾಸಿಕ‌ ನಿರ್ಧಾರ ಕೈಗೊಂಡಿದ್ದಾರೆ. ಇದು ಉತ್ತಮ ನಿರ್ಧಾರ ಎಂದಿದ್ದಾರೆ.

ಇದೇ ವೇಳೆ ಕ್ರೀಮಿ ಲೇಯರ್ ಸಿದ್ಧಾಂತದ ಬಗ್ಗೆ ನಾವು ಈಗ ಮಾತನಾಡಿದರೆ ಬಲಿಷ್ಠ ವರ್ಗದವರು ನಮ್ಮ ವಿರುದ್ಧ ಬಡ ದಲಿತ ವರ್ಗದವರನ್ನು ಎತ್ತಿ ಕಟ್ಟುವ ಅಪಾಯವಿದೆ. ಹಾಗಾಗಿ ಮೊದಲಿಗೆ ಆಯಾ ವರ್ಗದೊಳಗೆ ಕ್ರೀಮಿ ಲೇಯರ್ ಸಿದ್ಧಾಂತದ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment